ಮಾದರಹಳ್ಳಿ ಶಾಲೆಗೆ ಡೆಸ್ಕ್, ಚೇರ್‌ಗಳು ಹಸ್ತಾಂತರ

15KMD-2
Published on

ಕೆ.ಎಂ.ದೊಡ್ಡಿ: ಸಮೀಪದ ಮಾದರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ದಾನಿಗಳು ಡೆಸ್ಕ್ ಮತ್ತು ಚೇರ್‌ಗಳನ್ನು ಕೊಡುಗೆ ನೀಡಿದರು.

ಗ್ರಾಮದ ಸಮಾಜ ಸೇವಕರಾದ ಶ್ರೀಧರ್ ಮತ್ತು ಶಶಿಧರ್ ಅವರು ಪ್ರೌಢಶಾಲೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 12 ಡೆಸ್ಕ್ ಹಾಗೂ ಶಿಕ್ಷಕರಿಗಾಗಿ 6 ಚೇರ್‌ಗಳನ್ನು ಹಸ್ತಾಂತರಿಸಿದರು. ಗ್ರಾಮಸ್ಥರು ಹಾಗೂ ಶಾಲೆ ಸಿಬ್ಬಂದಿ ಶ್ರೀಧರ್ ಮತ್ತು ಶಶಿಧರ್ ಅವರನ್ನು ಸನ್ಮಾನಿಸಿದರು.

ಗ್ರಾಪಂ ಮಾಜಿ ಸದಸ್ಯ ಚೌಡೇಶ್, ಮುಖಂಡರಾದ ಚನ್ನಶೇಖರ್, ಕೆ.ಕೆಂಪೇಗೌಡ, ಯೋಗೇಶ್, ಮುಖ್ಯ ಶಿಕ್ಷಕಿ ಸುಮಾತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net