

ಹೊಳಲ್ಕೆರೆ: ದ್ರೌಪದಿಯ ವಸ್ತ್ರಾಪರಹಣ ಸಂದರ್ಭ ನೆರವಿಗೆ ಧಾವಿಸಿದ ಶ್ರೀಕೃಷ್ಣ ಧರ್ಮ ಉಳಿವು ಆಗಬೇಕೆಂಬ ಇಚ್ಛೆ ಹೊಂದಿದ್ದನು ಎಂದು ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ತಹಸೀಲ್ದಾರ್ ಬೀಬಿ ಫಾತಿಮಾ, ಯಾದವ ಸಮಾಜದ ಮುಖಂಡರಾದ ತಿಮ್ಮಪ್ಪ, ಬಸವರಾಜ್ ಯಾದವ್, ಕೇಶವಣ್ಣ, ಡಿ.ಸಿ.ಮೋಹನ್, ಬಂಗಾರಪ್ಪ ಇತರರಿದ್ದರು.