ವಿನ್ಯಾಸ-ತಂತ್ರಜ್ಞಾನ ಅಭಿವೃದ್ಧಿ ಕಾರ್ಯಾಗಾರ

workshop
Published on

ಹುಬ್ಬಳ್ಳಿ: ಲಘು ಉದ್ಯೋಗ ಭಾರತೀ ಹುಬ್ಬಳ್ಳಿ-ಧಾರವಾಡ ವತಿಯಿಂದ ಧಾರವಾಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ 30 ಮಹಿಳಾ ಕಸೂತಿ ಕಲಾವಿದರಿಗಾಗಿ ವಿನ್ಯಾಸ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಲಾವಿದರಿಗೆ ಡಿಸೈನಿಂಗ್, ಉತ್ಪನ್ನಾಭಿವೃದ್ಧಿ ಮತ್ತು ಪ್ರೊಟೋಟೈಪ್ ತಯಾರಿಕೆ ಕುರಿತು ತರಬೇತಿ ನೀಡಲಾಯಿತು. ಡಿಜಿಟಲ್ ವೇದಿಕೆಗಳು, ಇ-ವಾಣಿಜ್ಯ ಮಾರುಕಟ್ಟೆಗಳು ಮತ್ತು ಸರ್ಕಾರದ ಬೆಂಬಲಾತ್ಮಕ ಯೋಜನೆಗಳ ಮೂಲಕ ಕಲಾವಿದರಿಗೆ ಇರುವ ಅವಕಾಶಗಳನ್ನು ತಿಳಿಸಲಾಯಿತು.

ಕಲಾವಿದರ ಹೊಸ ವಿನ್ಯಾಸಗಳ ಪ್ರದರ್ಶನದೊಂದಿಗೆ ಕಾರ್ಯಾಗಾರ ಸಮಾರೋಪಗೊಂಡಿತು. ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಲಘು ಉದ್ಯೋಗ ಭಾರತೀ ಅಧ್ಯಕ್ಷ ಪ್ರಶಾಂತ ಹೆಬಸೂರು, ಕಾರ್ಯದರ್ಶಿ ಹೇಮಾ ಬೆಂಟೂರು, ಅಪರ್ಣಾ ಪುಜಾರಿ, ಧಾರವಾಡ ಹಸ್ತಕಲಾ ಮತ್ತು ಕೌಶಲ್ಯಾಭಿವೃದ್ಧಿ ಕಚೇರಿ ಸಹಾಯಕ ನಿರ್ದೇಶಕ ಕಿರಣ್ ವಿ. ಎನ್., ವಿನ್ಯಾಸಕಾರ ಶೈಲೇಶ ಪರ್ವರ್, ಮಾನಸಿ ಜೋಶಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net