ದೇಸಿ ಕ್ರೀಡೆಗಳ ಆಯೋಜನೆ ಹೆಚ್ಚಲಿ

20Rayabag1
Published on

ರಾಯಬಾಗ: ಗ್ರಾಮೀಣ ಕ್ರೀಡೆಗಳು ಉಳಿಯಬೇಕಾದರೆ, ದೇಸಿ ಕ್ರೀಡೆಗಳಾದ ಕುಸ್ತಿ, ಕಬಡ್ಡಿಯಂತಹ ಪಂದ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕೆಂದು ಕವಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.

ತಾಲೂಕಿನ ಭಿರಡಿ ಗ್ರಾಮದ ಮುರಸಿದ್ಧೇಶ್ವರ ಜಾತ್ರೆ ಅಂಗವಾಗಿ

ಜಿಲ್ಲಾ ಅಮೆಚೂರ್​ ಕಬಡ್ಡಿ ಅಸೋಶಿಯೇಷನ್​, ರಾಯಣ್ಣ ಸ್ಪೋರ್ಟ್ಸ್​, ಸೋಶಿಯಲ್​ ಕ್ಲಬ್​ ಹಾಗೂ ರಾಯಬಾಗದ ರಾಯಣ್ಣ ಗೋ ಗ್ರೀನ್​ ೌಂಡೇಷನ್​ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 4ನೇ ವರ್ಷದ ರಾಷ್ಟ್ರಮಟ್ಟದ ಮಹಿಳೆಯರ ಕಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಹಿಳೆಯರು ಶಾರೀರಿಕವಾಗಿ ಸದೃಢರಾಗಿ ಇಂತಹ ದೇಸಿ ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತರಬೇಕು ಎಂದರು.

ಶೇಗುಣಸಿ ವಿರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಭಿರಡಿ ಗ್ರಾಮದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಮಹಿಳೆಯರ ಕಬಡ್ಡಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳ ಮಹಿಳಾ ತಂಡಗಳು ಭಾಗವಹಿಸಿದ್ದು ಹೆಮ್ಮೆಯ ವಿಷಯ. ಕ್ರೀಡೆಯಲ್ಲಿ ಸೋಲು&ಗೆಲುವಿಗಿಂತ ಸೌಹಾರ್ದಯುತವಾಗಿ ಆಟವಾಡುವುದು ಮುಖ್ಯ ಎಂದರು.

ಗ್ರಾಪಂ ಅಧ್ಯ ಸದಾಶಿವ ದೇಶಿಂಗೆ, ಸೋಮೇಶ್ವರ ಸೊಸೈಟಿ ಅಧ್ಯ ರಾಮಚಂದ್ರ ನಿಶಾನದಾರ, ಗ್ರಾಪಂ ಉಪಾಧ್ಯೆ ಕೃಷ್ಣಾಬಾಯಿ ಭೆಂಡೆ, ಬೆಳಗಾವಿ ಆರ್​ಎಲ್​ಎಸ್​ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್​.ಬಿ.ತಾರದಳ್ಳಿ, ರವೀಂದ್ರ ಹೀರೆಮಠ, ನಿರ್ಮಲಾ ಗುರವ, ರೇಖಾ ನಿಡವಣಿ, ಮಲ್ಲಪ್ಪ ನಿಶಾನದಾರ, ರಾಮು ಯಲಗುದ್ರಿ, ಪಿರನಗೌಡ ಂಟಿ, ಅಶೋಕ ಭೆಂಡೆ, ಬಾಳಪ್ಪ ಭೆಂಡೆ, ರಾಜು ನಿಡವಣಿ, ಅಲಗೌಡ ಪಾಟೀಲ, ವಿಠ್ಠಲ ಕೂಗೆ, ಶೋಭಾ ಬನಶಂಕರಿ ಇತರರಿದ್ದರು. ಉಪನ್ಯಾಸಕ

ಆರ್​.ವೈ.ಯಮಗರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net