ದೇಸಿ ಕ್ರೀಡೆ ಬೆಳೆಸಲಿ

16Ainapur1
Published on

ಐನಾಪುರ: ದೇಸಿ ಕ್ರೀಡೆಗಳನ್ನು ಪ್ರತಿಯೊಬ್ಬರೂ ಬೆಳೆಸಬೇಕು. ಆಟೋಟಗಳಲ್ಲಿ ಪಾಲ್ಗೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಇಲ್ಲಿನ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಸಂಗ್ರಾಮ ಕಲ್ಲು ಹಾಗೂ ಗುಂಡು ಎತ್ತುವ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರೂ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಜಾತ್ರೆ ನಿಮಿತ್ತ ದೇಸಿ ಕ್ರೀಡೆ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಗುಂಡು ಎತ್ತುವ ಸ್ಪರ್ಧೆಯಲ್ಲಿ ಕಲಬುರ್ಗಿ ಜಿಲ್ಲೆಯ ಕರೆಪ್ಪ ಯಡ್ರಾವಿ ಪ್ರಥಮ, ಮಸೀಮನಾಳದ ಗುಳಪ್ಪ ಬೀಸನಾಳ ದ್ವಿತೀಯ, ಶೇಗುಣಸಿ ಗ್ರಾಮದ ಸಂಗಣ್ಣ ಗೌಡಣ್ಣವರ ತೃತೀಯ, ಅಮೃತ ಗೌಡಣ್ಣವರ ಚತುರ್ಥ ಸ್ಥಾನ ಪಡೆದುಕೊಂಡರು.

ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಬನಹಟ್ಟಿಯ ಮುತ್ತು ಗಡ್ಡಿ ಪ್ರಥಮ, ಬೀಸನಾಳದ ರೀಯಾಜ್ ಜಮಾದಾರ ದ್ವಿತೀಯ, ಬನಹಟ್ಟಿಯ ರುದ್ರೇಶ ಬನಹಟ್ಟಿ ತೃತೀಯ, ಹೆಬ್ಬಾಳದ ಪ್ರವೀಣ ಹೆಬ್ಬಾಳ ಚತುರ್ಥ ಸ್ಥಾನ ಪಡೆದುಕೊಂಡರು.

ಮುದಕಪ್ಪ ವಸ್ತಾದ, ಕುಮಾರ ಪೈಲವಾನ, ಗುಂಡು ಕುಡವಕ್ಕಲಗಿ, ಸುರೇಶ ಗೌಡನ್ನವರ, ಉದಯ ಬಾಳಿಕಾಯಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ತಮ್ಮಣ್ಣ ಪಾರಶೆಟ್ಟಿ, ರಾಜೇಂದ್ರ ಪೋದ್ದಾರ, ದಾದಾ ಪಾಟೀಲ, ಸುರೇಶ ಅಡಿಶೇರಿ, ಅಮಗೊಂಡ ಒಡೆಯರ, ಪ್ರಕಾಶ ಕೋರ್ಬು, ಭರತ ಲೋಂಡೆ, ವಿಕಾಸ ಜಾಧವ, ರಾವುಲ ಬಣಜವಾಡ, ರವಿ ಮಾಳಿ, ನಾರಾಯಣ ಕುಲಕರ್ಣಿ, ಭರತೇಶ ತೇರದಾಳೆ, ಅಶೋಕ ಅಪರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net