

ನಾಗರಮುನ್ನೋಳಿ: ಯುವಕರು ಭಾರತೀಯ ಸಂಸ್ಕೃತಿ, ಪರಂಪರೆ ರೂಢಿಸಿಕೊಳ್ಳುವ ಮೂಲಕ ದೇಸಿ ಕ್ರೀಡೆಗಳಲ್ಲಿ ಪಾಲೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಗ್ರಾಮದ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ರಾಷ್ಟ್ರಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಯುವಕರು ದುಶ್ಚಟಗಳಿಂದ ದೂರವಾಗಿ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಹಳ್ಳಿಗಳಲ್ಲಿ ನಡೆಯುವ ಜಾತ್ರೆ ಹಾಗೂ ಉತ್ಸವಗಳಲ್ಲಿ ಭಾಗಿಯಾಗಿ ಸೊಗಡನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸಕ ಡಿ.ಎಂ.ಐಹೊಳೆ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿದರು.
ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರ ಕೇಸರಿ ಕೊಲ್ಲಾಪೂರದ ಪೈ.ಜ್ಞಾನೇಶ್ವರ ಜಂಬದಾಡೆ ಪ್ರಥಮ, ಕರ್ನಾಟಕದ ಡಬಲ ಕೇಸರಿ ಪೈ. ಕಾರ್ತಿಕ ಕಾಟಿ ದ್ವಿತೀಯ ಹಾಗೂ ಕರ್ನಾಟಕ ಕೇಸರಿ ಪೈ.ಸಂಗಮೇಶ ಕೋಹಳ್ಳಿ ತೃತೀಯ ಸ್ಥಾನ ಪಡೆದರು.ಬಾಲಕಿಯರ ವಿಭಾಗದಲ್ಲಿ ಕು.ರಾಧಿಕಾ ಗದಗ ಕು.ಪಾಂಜಲ ಪ್ರಥಮ ಸ್ಥಾನ ಪಡೆದು1 ಕೆಜಿ ಬೆಳ್ಳಿ ಗದೆ ತಮ್ಮದಾಗಿಸಿಕೊಂಡರು. ಕರ್ನಾಟಕ ಚಾಂಪಿಯನ್ ಕು.ಪ್ರೀತಿ ಚಿಕ್ಕೋಡಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಗದೆ ಪಡೆದರು.
ಜಿಪಂ ಮಾಜಿ ಸದಸ್ಯ ಪವನ ಕತ್ತಿ, ಯುವ ನಾಯಕ ಬಸವಪ್ರಸಾದ ಜೊಲ್ಲೆ, ಮಹಾವೀರ ಮೊಹಿತೆ, ಉದ್ಯಮಿ ಮಹೇಶ ಬೆಲ್ಲದ, ಸುರೇಶ ಬೆಲ್ಲದ, ಡಾ ಎಂ.ಬಿ.ಕುಂಬಾರ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‌್ಯಾಯಿ, ಕೆಎಂಎಫ್ ವಿ.ಬಿ.ಈಟಿ, ಶಿವಾನಂದ ಮರ‌್ಯಾಯಿ, ಲಕ್ಷಣ ಮಂಗಿ, ಶಿವು ಪಾಟೀಲ, ವೃಷಭ ಪಾಟೀಲ, ಲಕ್ಷ್ಮೀಸಾಗರ ಈಟಿ, ಬಸವರಾಜ ಮನಗೂಳಿ, ವಿನಾಯಕ ಕುಂಬಾರ, ಲಕ್ಷಣ್ಮ ಪೂಜೇರಿ, ಶಿವಪುತ್ರ ಮನಗೂಳಿ,ರಾಜು ಕುಂಬಾರ, ಬಸವಣ್ಣಿ ಕುಂಬಾರ, ನಿಜಾಮ್ ಫೆಂಡಾರಿ, ಮಾರುತಿ ಮರ‌್ಯಾಯಿ, ಬಸವರಾಜು ಕುಂಬಾರ, ಡಿ.ಎಸ್. ಕರೋಶಿ, ಅರುಣ್ ಮರ‌್ಯಾಯಿ, ಸಿದ್ದು ಈಟಿ, ಎಮ್.ಬಿ.ಆಲೂರೆ, ಮಹಾದೇವ ಚೌಗಲಾ, ರಾಜು ಚೌಹಾಣ, ವಿದ್ಯಾಸಾಗ ಈಟಿ, ಅನಿಲ ಈಟಿ, ಜೋತ್ಯಪ್ಪಾ ಖಗನ್ನವರ ಉಪಸ್ಥಿತರಿದರು. ರಮೇಶ ಕುಂಬಾರ, ಬಸವರಾಜ ಘೋಡಗೇರಿ, ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.