

ರಾಮದುರ್ಗ: ಭಾರತೀಯ ಪರಂಪರೆಯ ಪ್ರತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನೇಕಾರ ಸಮುದಾಯದ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಯುವಕರಿಗೆ ದೇಸಿ ಸಂಸ್ಕೃತಿ ದಾರಿದೀಪವಾಗಿದೆ ಎಂದು ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.
ಪಟ್ಟಣದ ರಾಧಾಪುರ ಪೇಟೆಯಲ್ಲಿ ಹೋಳಿ ಹಬ್ಬದ ಅಂಗವಾಗಿ ದೇವಾಂಗ ಸಮುದಾಯ ಶುಕ್ರವಾರ ಹಮ್ಮಿಕೊಂಡಿದ್ದ ವಾಯ್ಸ ಆ್ ನೇಕಾರ ಪೇಟೆ ಸೀಸನ್-1ರ ಕರೋಕೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಕಳೆದ 14 ವರ್ಷಗಳಿಂದ ನಿರಂತರವಾಗಿ ಹೋಳಿ ಹಬ್ಬವನ್ನು ವಿಶಿಷ್ಟ ವಾಗಿ ಆಚರಿಸುವ ಮೂಲಕ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವ ಸಂಘಟಕರ ಕಾರ್ಯಕ್ಕೆ ಅಗತ್ಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕೃಷ್ಣಸ್ವಾಮಿ ದೇವಾಂಗಮಠ ಮಾತನಾಡಿ, ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ, ವಿನಯ, ಶಿಸ್ತು ಹಾಗೂ ಸಂಯಮ ಬಹುಮುಖ್ಯವಾಗಿದೆ. ಆದರ್ಶ ಮೌಲ್ಯಗಳನ್ನು ರೂಢಿಸಿಕೊಂಡು ಮಾದರಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಮಹಾಂತೇಶ ದೊಡವಾಡ, ಜಗದೀಶ ಲಾಹೋಟಿ, ನೇಕಾರ ಸಮುದಾಯಗಳ ಒಕ್ಕೂಟದ ತಾಲೂಕಾಧ್ಯಕ್ಷ ನಾರಾಯಣ ಹೂಲಿ ಮಾತನಾಡಿದರು. ಸ್ಪರ್ಧೆ ವಿಜೇತರು: ಹೋಳಿ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ವಾಯ್ಸ ಆ್ ನೇಕಾರ ಪೇಟೆ ಸೀಸನ್-1ರ ಕರೋಕೆ ಸ್ಪರ್ಧೆಯಲ್ಲಿ ಪ್ರಥಮೇಶ ಯಾದವಾಡ ಮತ್ತು ಮನೋಹರ ಲ್ಯಾವಿ ಪ್ರಥಮ, ರಾಜವರ್ಧನ ರಾಗಿ ಮತ್ತು ಸಂತೋಷ ಬರಡೂರ ದ್ವಿತೀಯ ಹಾಗೂ ವೈಶಾಲಿ ಬಟಕುರ್ಕಿ ಹಾಗೂ ಪ್ರಮೋದ ಕೊಳದೂರ ತೃತೀಯ ಸ್ಥಾನ ಪಡೆದರು.
ಕುಬೇರ ಗರಡಿಮನಿ, ಬಾಳು ರಾಠಿ, ಮನೋಜ ಕಾಂಕಾಣಿ, ದಶರಥಪ್ಪ ಸೂಳಿಭಾವಿ, ವಿಜಯ ಆರಿ, ಅಂಬರೀಷ ಬಟಕುರ್ಕಿ, ಅಶೋಕ ಮೊರಬದ, ಶಂಕರ ಖಾನಾಪುರ, ರವೀಂದ್ರ ಬಸರಗಿ, ಬಾಬಾಲಾಲ ಮಹಾತ, ಕೃಷ್ಣ ಕೊಳದೂರ, ಯಲ್ಲಪ್ಪ ತೊರಗಲ್ಲ ಇತರರಿದ್ದರು. ಶಿಕ್ಷಕ ಟಿ.ಜಿ. ಕರದಿನ ಸ್ವಾಗತಿಸಿದರು. ಅಶೋಕ ಖಾನಾಪುರ ನಿರೂಪಿಸಿದರು.