

ಕಾರವಾರ: ಮಂತ್ರಿ ಮಾಡುವುದು ಹೈಕಮಾಂಡ್, ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ನಾನು ರಾಜ್ಯ ವಿಧಾನಸಭೆಯ ಇತಿಹಾಸದಲ್ಲಿ ಅತ್ಯಧಿಕ ಬಾರಿ ಎಂದರೆ 9 ಬಾರಿ ಆಯ್ಕೆಯಾಗಿ ಶಾಸಕನಾಗಿದ್ದೇನೆ ಎಂಬುದು ನಿಜ. ಆದರೆ, ಮಂತ್ರಿ ಸ್ಥಾನಕ್ಕಾಗಿ ದುಂಬಾಲು ಬೀಳುವುದು ನನ್ನ ಜಾಯಮಾನವಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ನಗರದಲ್ಲಿ ಅಽಕಾರಿಗಳ ಜತೆ ಅನೌಪಚಾರಿಕ ಸಭೆ ನಡೆಸಿ, ನಂತರ ಮಾಧ್ಯಮ ಪ್ರತಿನಿಽಗಳ ಜತೆ ಮಾತನಾಡಿದರು. ಸರ್ಕಾರ 2 ವರ್ಷ ಪೂರೈಸುತ್ತಿದೆ. ನಾಯಕರಾದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೆಜ್ಜೆ ಹಾಕಿ, ಆಡಳಿತ, ಅಭಿವೃದ್ಧಿ, ಕಾನೂನು ಸುವ್ಯವಸ್ಥೆ ಹೀಗೆ ಪ್ರತಿಯೊಂದು ಹಂತದಲ್ಲಿ ಒಳ್ಳೆಯ ಕೆಲಸ ಮಾಡಿದೆ. ನನ್ನ ಎರಡು ವರ್ಷದ ಶಾಸಕತ್ವದ ಬಗ್ಗೆ ತೃಪ್ತಿ ಇದೆ. ಆದರೆ, ಜನ ನನ್ನ ಮೇಲೆ ವಿಶ್ವಾಸವಿಟ್ಟು, ಮತ ನೀಡಿದ್ದಾರೆ. ಅವರ ಆಶೆ, ಆಕಾಂಕ್ಷೆಗೆ ಸ್ಪಂದಿಸಬೇಕು. ಇನ್ನಷ್ಟು ಕಾರ್ಯ ನಿರ್ವಹಣೆ ಮಾಡಬೇಕು ಎಂಬ ಅಪೇಕ್ಷೆ ನನ್ನದು.ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಸಾಧ್ಯವಾದಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರ ನಿರೀಕ್ಷೆ ಇನ್ನೂ ಹೆಚ್ಚಿರಬಹುದು ಎಂದರು.
ಉತ್ತರ ಕನ್ನಡ ಜಿಲ್ಲೆಗೆ ಬೇರೆ ಎಲ್ಲ ಜಿಲ್ಲೆಗಿಂತ ಹೆಚ್ಚು ಪ್ರವಾಸೋದ್ಯಮದ ಅವಕಾಶವಿದೆ. ಪ್ರವಾಸೋದ್ಯಮ ಬೆಳೆಯಬೇಕು. ಈ ನಿಟ್ಟಿನಲ್ಲಿ ಕಾರವಾರದಲ್ಲಿ ನಾನು ಸಚಿವನಾಗಿದ್ದಾಗ ರಾಕ್ ಗಾರ್ಡನ್ ಮಾಡಿಸಿದ್ದೆ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು ಎಂದು ನೆನಪಿಸಿಕೊಂಡರು. ಶಿರೂರು ಗುಡ್ಡ ಕುಸಿದು ಗಂಗಾವಳಿಯಲ್ಲಿ ಬಿದ್ದು ಮಣ್ಣು ತೆಗೆಯಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಽಕಾರಿ ತಿಳಿಸಿದ್ದಾರೆ ಎಂದರು.
ನಮ್ಮ ಸೈನಿಕರ ಬಗ್ಗೆ ಅಗೌರವ ಸರಿಯಲ್ಲ
ನಮ್ಮ ಸೇನೆಯ ಬಗ್ಗೆ ಗೌರವ ಇರಬೇಕು. ಯಾವುದೇ ಶಾಸಕರು ಅಥವಾ ಯಾರಾದರೂ ನಮ್ಮ ಆರ್ಮ್ ಫೋರ್ಸ್ ಬಗ್ಗೆ ಕೆಟ್ಟದಾಗಿ ಮಾತನಾಡುವುದು ತಪು÷್ಪ ಎಂದು ಆರ್.ವಿ.ದೇಶಪಾಂಡೆ ಹೇಳಿದರು.
ಪಾಕಿಸ್ತಾನ ಅಭಿವೃದ್ಧಿಯಾಗಬೇಕು. ಅಲ್ಲಿನ ಜನರೂ ಚೆನ್ನಾಗಿರಬೇಕು. ಭಾರತ ಪಾಕಿಸ್ತಾನದ ಸಂಬAಧ ಚೆನ್ನಾಗಿರಬೇಕು ಎಂಬುದು ನಿಜ. ಆದರೆ, ಪಾಕಿಸ್ತಾನದವರು ಅನಾವಶ್ಯಕವಾಗಿ ಪ್ರೀತಿ ವಿಶ್ವಾಸಕ್ಕೆ, ಶಾಂತತೆಗೆ ಧಕ್ಕೆ ತರುತ್ತಿದ್ದಾರೆ. ಆಗ ಅವರಿಗೆ ಬುದ್ಧಿ ಕಲಿಸಬೇಕಿದೆ. ಪಾಕಿಸ್ತಾನ ಸೋತು ಹತಾಶವಾಗಿದೆ ಎಂದರು.