ದೇಶಭಕ್ತಿಯ ಪ್ರತೀಕ ಛತ್ರಪತಿ ಶಿವಾಜಿ, ಕ್ಷತ್ರಿಯ ಮರಾಠ ಪರಿಷತ್ ತಾಲೂಕು ಅಧ್ಯಕ್ಷ ಶಿವಾಜಿರಾವ್‌ಶಿಂಧೆ ಅಭಿಮತ

19 Nela ph 01 Shivaji Jayanthi
Published on

ನೆಲಮಂಗಲ: ದೇಶಭಕ್ತಿಯ ಪ್ರತೀಕವಾಗಿರುವ ಛತ್ರಪತಿ ಶಿವಾಜಿ ಮಹಾರಾಜರು ಪ್ರತಿಯೊಬ್ಬ ಭಾರತೀಯರಿಗೆ ಆದರ್ಶವಾಗಿದ್ದಾರೆ ಎಂದು ಕ್ಷತ್ರಿಯ ಮರಾಠ ಪರಿಷತ್ ತಾಲೂಕು ಅಧ್ಯಕ್ಷ ಶಿವಾಜಿರಾವ್‌ಶಿಂಧೆ ಅಭಿಪ್ರಾಯಪಟ್ಟರು.

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿಯಲ್ಲಿ ಮಾತನಾಡಿದರು.

ಪರಕೀಯರ ಆಕ್ರಮಣದಿಂದ ಹರಿದು ಹಂಚಿಹೋಗಿದ್ದ ಹಿಂದುಸ್ಥಾನ ಒಗ್ಗೂಡಿಸುವ ಮಹತ್ವದ ಕಾರ್ಯಕ್ಕೆ ಕೈಹಾಕಿದವ. ಅನ್ಯಧರ್ಮೀಯರ ದೌರ್ಜನ್ಯ, ದಬ್ಬಾಳಿಕೆಗೆೆ ಹೆದರಿ ಮತಾಂತರಗೊಂಡಿದ್ದ ಹಿಂದುಗಳನ್ನು ಮತ್ತೆ ಹಿಂದುಧರ್ಮಿಯರನ್ನಾಗಿ ಮಾಡಿದ ಶಿವಾಜಿಮಹರಾಜರ ಶೌರ್ಯ, ಸಾಹಸಗಳು ದೇಶದ ಯುವಪೀಳಿಗೆಗೆ ಸ್ಫೂರ್ತಿಯಾಗಿವೆ ಎಂದರು.

ನೌಕಪಡೆಯ ನಿರ್ಮಾಣಕ್ಕಾಗಿ ಮುಂಬೈನ ಸಮುದ್ರದಲ್ಲಿ ನಿರ್ಮಿಸಿದ್ದ ಸಿಂಧುದುರ್ಗಾ ಸ್ಥಳದಲ್ಲಿ ಶಿವಾಜಿಮಹಾರಾಜರ ಪುತ್ಥಳಿ ನಿರ್ಮಾಣಕ್ಕೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿರುವುದು ಸಂತಸದ ಸಂಗತಿ ಎಂದರು.

ತಹಸೀಲ್ದಾರ್ ಎಂ.ಶ್ರೀನಿವಾಸಯ್ಯ ಮಾತನಾಡಿ, ಇತಿಹಾಸದ ಪುಟಗಳಲ್ಲಿ ದೇಶಭಕ್ತನಾಗಿ ಕಾಣಿಸಿಕೊಳ್ಳುವ ಛತ್ರಪತಿ ಶಿವಾಜಿ ಅಜರಾಮರವಾಗಿ ಉಳಿದುಕೊಂಡಿದ್ದಾರೆ ಎಂದರು.

ಶಿವಾಜಿ ಜಯಂತಿ ಕೇವಲ ಮರಾಠ ಸಮುದಾಯಕ್ಕೆ ಸೀಮಿತವಾಗಿಲ್ಲ. ದೇಶದ ಪ್ರತಿಯೊಬ್ಬ ಭಾರತೀಯರಿಗೆ ಸಲ್ಲುತ್ತದೆ ಎಂದು ಸಮಾಜದ ಮುಖಂಡ ದುರ್ಗೋಜಿರಾವ್ ತಿಳಿಸಿದರು.

ಗೌರವನಮನ: ತಾಲೂಕು ಕಚೇರಿಯ ವಿವಿಧ ಶಾಖೆಯ ಮುಖ್ಯಸ್ಥರು ಸಿಬ್ಬಂದಿ ಸೇರಿ ಕ್ಷತ್ರಿಯ ಮರಾಠ ಜನಾಂಗ ಮುಖಂಡರು ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಪುರಸಭೆ ಮಾಜಿ ಸದಸ್ಯ ನರಸಿಂಹಮೂರ್ತಿ, ಮುಖಂಡರಾದ ಕೇಶವರಾವ್, ಅಶೋಕ್‌ರಾವ್, ಮಂಜುನಾಥ್‌ರಾವ್, ನಾರಾಯಣರಾವ್, ಉಮಾಕುಮಾರ್, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಂ.ಗಂಗಬೈಲಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net