ಅಕ್ರಮ ದಾಸ್ತಾನು ಹೊಂದಿದ್ದ ಡಿಸೇಲ್ ಹರಾಜು

diesel
Published on


ಚನ್ನರಾಯಪಟ್ಟಣ : ಅಕ್ರಮವಾಗಿ ದಾಸ್ತಾನು ಮಾಡಿದ್ದ ಡಿಸೇಲ್ ಅನ್ನು ಅ.29 ರಂದು ಬೆಳಗ್ಗೆ 10 ಗಂಟೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ.


ಚನ್ನರಾಯಪಟ್ಟಣದ ಹೊರವಲಯದಲ್ಲಿರುವ ಬೆಂಗಳೂರು-ಹಾಸನ ಬೈಪಾಸ್ ರಸ್ತೆಯಲ್ಲಿರುವ ಧನುಷ್ ಹೋಟೆಲ್ ಪಕ್ಕದಲ್ಲಿರುವ ಭೈರವೇಶ್ವರ ಹೋಟೆಲ್‌ನಲ್ಲಿ ಶೇಷೆಗೌಡ ಎಂಬುವವರು ಆಕ್ರಮವಾಗಿ ದಾಸ್ತಾನು ಮಾಡಿದ್ದ 146 ಲೀಟರ್ ಡಿಸೇಲ್ ಅನ್ನು ನಗರ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದರು.


ಡಿಸೇಲ್ ಅನ್ನು ಸಂಗ್ರಹಿಸಿಟ್ಟುಕೊಳ್ಳಲಾರದ ವಸ್ತುವಾಗಿರುವುದರಿಂದ ಮತ್ತು ದಹ್ಯ ವಸ್ತುವಾಗಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಹರಾಜು ಹಾಕಲಾಗುತ್ತಿದ್ದು, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರು ಆಧಾರ್ ಕಾರ್ಡ್ ತರುವಂತೆ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net