ಅವಮಾನಕರ ಪಠ್ಯ ಅಳವಡಿಕೆ ಖಂಡನೀಯ

23 Dwd 2 S.V. Sankanur.
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಷ್ಟ್ರೀಯತೆಯ ತತ್ವಗಳಿಗೆ ವಿರೋಧವಾಗಿ ಭಾರತಮಾತೆ ಹಾಗೂ ಸಂವಿಧಾನಕ್ಕೆ ಅಪಮಾನವಾಗುವ ರೀತಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬಿಎ ಪ್ರಥಮ ವರ್ಷದ ಕನ್ನಡ ಪಠ್ಯಕ್ರಮದಲ್ಲಿ ಪಾಠಗಳು ಅಡಕವಾಗಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದ್ದಾರೆ.

ಪ್ರಕಟಣೆ ನೀಡಿರುವ ಅವರು, ಭಾರತ ದೇಶದಲ್ಲಿ ಜೀವಿಸುವ ಹಿಂದು, ಮುಸ್ಲಿಂ, ಕ್ರೆÊಸ್ತ, ಜೈನ, ಬೌದ್ಧ, ಸಿಖ್ ಹಾಗೂ ಪಾರ್ಸಿ ಧರ್ಮದವರು ಭಾರತಮಾತೆಯನ್ನು ಗೌರವಿಸುವುದು ಆದ್ಯ ಕರ್ತವ್ಯ. ನಮ್ಮ ದೇಶದ ರಾಷ್ಟ್ರೀಯತೆ, ಏಕತೆ ಮತ್ತು ಅಖಂಡತೆಯನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಆದ್ದರಿಂದ ಕುಲಪತಿಗಳು ತುರ್ತು ಕ್ರಮ ಕೈಗೊಂಡು ಭಾರತಾಂಬೆಗೆ ಹಾಗೂ ಸಂವಿಧಾನಕ್ಕೆ ಅಪಮಾನವಾಗದ ರೀತಿಯಲ್ಲಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಂಕನೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net