ಮೈಸೂರು ರಾಜಮನೆತನದ ಬಗ್ಗೆ ಅವಹೇಳನ, ಸಚಿವ ಯತೀಂದ್ರ ಕ್ಷಮೆಯಾಚನೆಗೆ ಡಿಎಸ್‌ಎಸ್ ಆಗ್ರಹ

ಎಸ್‌ಐಆರ್ ರದ್ದಾಗಬೇಕು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಆಗ್ರಹ
ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯSIR must be scrapped: Minister Dr. Yathindra Siddaramaiah demands
Published on: 

ಮೈಸೂರು: ಮೈಸೂರು ರಾಜಮನೆತನದವರ ಬಗ್ಗೆ ಹಗುರವಾದ ಮಾತುಗಳನ್ನು ಆಡಿರುವ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡಲೇ ಬಹಿರಂಗ ಕ್ಷಮೆಯಾಚಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಎಚ್ಚರಿಸಿದರು.

ಮೈಸೂರಿನ ರಾಜ ಮನೆತನವು ರಾಜ್ಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಮೊದಲಾದವಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಮೈಸೂರು ಸಂಸ್ಥಾನದ ಜನಪರ ಕಾರ್ಯಕ್ರಮಗಳು ಇಂದಿಗೂ ನಾಡಿನ ಜನತೆಗೆ ಅನುಕೂಲ ಕಲ್ಪಿಸಿವೆ. ಹೀಗಿರುವಾಗ ದಸರಾ ವಿಚಾರವಾಗಿ ಮೈಸೂರು ರಾಜಮನೆತನದ ಕುರಿತು ಅವರು ಆಡಿರುವ ಮಾತು ಸರಿಯಲ್ಲ. ದಸರಾ ವಿಶ್ವ ಮಾನ್ಯವಾಗಲು ರಾಜಮನೆತನ ಕಾರಣ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅನಗತ್ಯ ಕಾರಣ ನೀಡಿ ಅರಮನೆಯಲ್ಲಿ ನಡೆಯಬೇಕಾಗಿದ್ದ ಜಟ್ಟಿ ಕಾಳಗಕ್ಕೆ ಅಡ್ಡಿಯುಂಟು ಮಾಡಿ, ಈ ಬಾರಿ ಜಟ್ಟಿಕಾಳಗ ರದ್ದಾಗಲು ಪೊಲೀಸರೇ ಕಾರಣ. ಜಟ್ಟಿ ಕಾಳಗದಲ್ಲಿ ಅಪಾಯವಿದೆ ಎಂಬ ಕಾರಣ ನೀಡಿ ಆ ರೀತಿ ಮಾಡಲಾಯಿತು ಎಂಬ ಮಾತು ಕೇಳಿ ಬರುತ್ತಿದೆ. ಪೊಲೀಸ್ ಇಲಾಖೆ ಹೇಳಿದ ರೀತಿಯಲ್ಲಿಯೇ ದಸರಾ ನಡೆಸಲು ಸಾಧ್ಯವಿಲ್ಲ ಎಂದರು.

ರಾಜಮನೆತನ ಹಾಗೂ ಸರ್ಕಾರ ಪರಸ್ಪರ ಸಮನ್ವಯತೆಯಿಂದ ದಸರಾ ಆಚರಿಸಬೇಕು. ಪೊಲೀಸ್ ಇಲಾಖೆ ಹಾಗೂ ಸರ್ಕಾರ ಜಟಾಪಟಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಪದಾಧಿಕಾರಿಗಳಾದ ಕೆ. ನಂಜಪ್ಪ ಬಸವನಗುಡಿ, ಪೈಲ್ವಾನ್ ಕೃಷ್ಣ, ಎಚ್.ಬಿ. ದಿವಾಕರ್, ಕೆಂಪರಾಜು ಸೋಮನಹಳ್ಳಿ ಇದ್ದರು.