ಅವಹೇಳನಕಾರಿ ಪೋಸ್ಟ್ ಹಾಕಿದ ಯುವಕ ಅಂದರ್

crime-022204-16x9.jpg
Published on

ರಾಣೆಬೆನ್ನೂರ: ಮಸೀದಿ ಮೇಲೆ ಶ್ರೀರಾಮನ ಬಿಲ್ಲು ಬಾಣ ಇರುವಂತೆ ವೀಡಿಯೊ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಯುವಕನನ್ನು ಇಲ್ಲಿಯ ಶಹರ ಠಾಣೆ ಪೊಲೀಸರು ಬುಧವಾರ ರಾತ್ರಿ ಬಂಽಸಿದ್ದಾರೆ.
ನಗರದ ನಯನ ಕಿಟ್ಟದ ಬಂಽತ ಆರೋಪಿ.
ಈತ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನಗರದ ವಿವಿಧ ವೃತ್ತಗಳ ವೀಡಿಯೊಗಳನ್ನು ಮಾಡಿ ಅದರಲ್ಲಿ ಟಾಂಗಾಕೂಟದ ಬಳಿಯಿರುವ ಮಸೀದಿ ಬಂದಾಗ ಅದರ ಮೇಲೆ ಶ್ರೀರಾಮನ ಬಿಲ್ಲು ಬಾಣ ಬರುವಂತೆ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆ ಪೊಲೀಸರು ಆರೋಪಿಯನ್ನು ಬಂಽಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net