ಅವಹೇಳನಕಾರಿ ಪೋಸ್ಟ್; ರಾಣೆಬೆನ್ನೂರ ಪಾ ದೋಸ್ತ್ ಮೇಲೆ ಕೇಸು

Crime Logo
Published on


ರಾಣೆಬೆನ್ನೂರ: ಪ್ರಮೋದ್ ಮುತಾಲಿಕ್ ಕೈಯಲ್ಲಿ ಟಿಪ್ಪು ಸುಲ್ತಾನ ಫೋಟೊ ಕೊಟ್ಟು ಅವಹೇಳನಕಾರಿ ಬರಹ ಬರೆದು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಇಲ್ಲಿಯ ಪಂಪಾ ನಗರದ ತೌಸೀಫ್ ಪೈರೋಜಖಾನ ಬ್ಯಾಡಗಿ ಎಂಬುವರು ದೂರು ನೀಡಿದ್ದಾರೆ.
ರಾಣೆಬೆನ್ನೂರ ಪಾ ದೋಸ್ತ್ ಎನ್ನುವ ಇನ್ಸ್‌ಟಾಗ್ರಾಮ್‌ನಲ್ಲಿ ಪ್ರಮೋದ ಮುತಾಲಿಕ್ ಅವರ ಕೈಯಲ್ಲಿ ಟಿಪ್ಪುವಿನ ಫೋಟೊ ಕೊಟ್ಟು ಅವಹೇಳನವಾಗಿ ಬರೆದು ಹಾಕಲಾಗಿದೆ. ಇದು ಮುಸ್ಲಿಂ ಸಮಾಜಕ್ಕೆ ನೋವುಂಟು ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net