VIDEO | ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಗೆ ಬಳಸಿದ್ದ ಕುರ್ಚಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ?

MNG canter fire 13 JAN 20
Published on

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧಿಸಿದ ಪ್ರತಿಭಟನೆಗೆ ಬಳಸಿದ್ದ ಕುರ್ಚಿಗಳಿಗೆ ಕಿಡಿಗೇಡಿಗಳು ಭಾನುವಾರ ರಾತ್ರಿ ಬೆಂಕಿ ಹಚ್ಚಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ನಡೆಸಿದ ಪ್ರತಿಭಟನೆ ವೇಳೆ ಬಳಸಿದ್ದ ಕುಚ್ಚಿಗಳನ್ನು ತುಂಬಿದ್ದ ಕ್ಯಾಂಟರ್ ಟ್ರಕ್​ಬೆಂಕಿಗಾಹುತಿಯಾಗಿದೆ. ದೇರಳಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, 2,500 ಕುರ್ಚಿ ಮತ್ತು ಲಾರಿ ಬೆಂಕಿಗಾಹುತಿಯಾಗಿದೆ.

ದೇರಳಕಟ್ಟೆ ಪೌರತ್ವ ಸಂರಕ್ಷಣಾ ಸಮಿತಿ ಭಾನುವಾರ ಪತ್ರಿಭಟನೆ ನಡೆಸಿತ್ತು. ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಆಗಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ. ವಿವರಗಳಿಗೆ ದ್ವಿಗ್ವಿಜಯ ನ್ಯೂಸ್ ವಿಡಿಯೋ ನೋಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net