ಅತಿದೊಡ್ಡ ಲಿಖಿತ ಸಂವಿಧಾನವನ್ನು ನೀಡಿದ ಧ್ರುವತಾರೆ

15 myk
Published on

ಮಾಯಕೊಂಡ: ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಚೇತನ ಅಂಬೇಡ್ಕರ್ ಅವರು ಭಾರತದ ಧ್ರುವತಾರೆ ಎಂದು ಉಪ ತಹಸಿಲ್ದಾರ್ ಹಾಲೇಶ್ ಬಣ್ಣಿಸಿದರು.

ಹೋಬಳಿಯ ನಾಡಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಇದೇ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.

ಗ್ರಾಮ ಆಡಳಿತಾಧಿಕಾರಿ ಬಸವರಾಜ್ ನಗಾರಿ, ಲೋಹಿತ್ ಕುಮಾರ್, ಮಹಾಂತೇಶ್ ಕೋಟೆಪ್ಪ, ಪ್ರಭಾಕರ್ ನೇತ್ರಾವತಿ, ಪರಮೇಶ್ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net