ಉಪಸಭಾಪತಿ ನೇಮಿಸದೆ ಪ್ರಧಾನಿ ನರೇಂದ್ರ ಮೋದಿ ಧೋಖಾ

PM Modi Kharge
Published on

ವ್ಯತ್ಯಾಸ ಸರಿಪಡಿಸಲು ಮರುಜಾತಿಗಣತಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ದಶಕದ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಸಾಮಾಜಿಕ, ಶೈಕ್ಷಣಿಕ ಗಣತಿ ಮಾಡಲಾಗಿದೆ. ೧೦ ವರ್ಷವಾಗಿದ್ದೂ ಎಸ್ಸಿ, ಎಸ್‌ಟಿ, ಓಬಿಸಿ ಪಟ್ಟಿಯಿಂದ ವ್ಯತ್ಯಾಸವಾಗಿದೆ. ಎಲ್ಲ ವ್ಯತ್ಯಾಸ ಸರಿಪಡಿಸಲು ಹೊಸ ಗಣತಿ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು. ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹೊಸದಾಗಿ ಎಲ್ಲವೂ ಗಣತಿಯಲ್ಲಿ ಬರಲಿದೆ. ಬಿಟ್ಟು ಹೋದರೆ ಪುನಃ ಸೇರ್ಪಡೆ ಮಾಡಬೇಕು ಎಂಬುದು ಮರು ಜಾತಿ ಗಣತಿ ಉz್ದÉÃಶ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.

ಉಪಸಭಾಪತಿ ನೇಮಿಸದೆ ಧೋಖಾ

ಸಂಸತ್‌ನಲ್ಲಿ ಸಾಂವಿಧಾನಿಕವಾಗಿ ಉಪ ಸಭಾಪತಿಯನ್ನು ನೇಮಿಸಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇಮಕ ಮಾಡದೇ ಪ್ರಜಾಪ್ರಭುತ್ವವನ್ನು ಮರೆತ್ತಿದ್ದಾರೆ ಎಂದು ರಾಜ್ಯಸಭೆ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು. ಪ್ರತಿಪಕ್ಷದ ಅಥವಾ ದೊಡ್ಡ ಪಕ್ಷಕ್ಕೆ ಉಪ ಸ್ಪೀಕರ್ ಹುದ್ದೆ ನೀಡುವುದು ಮೊದಲಿನಿಂದಲು ನಡೆದು ಬಂದಿದೆ. ಇದು ಪ್ರಜಾಪ್ರಭುತ್ವವನ್ನು ಮರೆಯುವ ಕೆಲಸ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net