ಗೆಲುವಲ್ಲ, ಗುರಿ ತಲುಪುವುದು ಮುಖ್ಯ...

Merathan
Published on

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಭಿಮತ

ಕೆನರಾ ಫ್ರೀಡಂ ರನ್​ ಮೆರಾಥಾನ್​ಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬೆಳಗ್ಗೆಯ ಓಟ ದೈಹಿಕ, ಮಾನಸಿಕವಾಗಿ ಸಬಲರಾಗಲು ಉತ್ತೇಜನ ನೀಡುತ್ತದೆ. ಮುಖ್ಯವಾಗಿ ವಾಕಿಂಗ್​ ಅಥವಾ ರನ್ನಿಂಗ್​ ಪ್ರಕ್ರಿಯೆಯಿಂದ ಮನೋನಿಗ್ರಹ, ತಾಳ್ಮೆ ಲಭಿಸುತ್ತದೆ. ಹೀಗಾಗಿ ಮೆರಾಥಾನ್​ನಲ್ಲಿ ಗೆಲುವೇ ಮುಖ್ಯ ಗುರಿ ಆಗಬಾರದು. ಸಂಪೂರ್ಣವಾಗಿ ಓಟ ಮುಗಿಸಿ ಗುರಿ ತಲುಪಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.

ಉಡುಪಿಯ ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿ ಪ್ರಾಯೋಜಕತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಆಗಸ್ಟ್​ 10ರಂದು ಬೆಳಗ್ಗೆ ಆಯೋಜಿಸಿದ್ದ ಕೆನರಾ ಫ್ರೀಡಂ ರನ್​ನ 4ನೇ ಆವೃತ್ತಿಯ ಮೆರಾಥಾನ್​ಗೆ ಬ್ಯಾಂಕ್​ನ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದರು.

ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯ ಮಹಾಪ್ರಬಂಧಕ ಎಚ್​.ಕೆ. ಗಂಗಾಧರ ಮಾತನಾಡಿ, ದೇಶದ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಕೆನರಾ ಫ್ರೀಡಂ ರನ್​ ಆಯೋಜಿಸಲಾಗಿದೆ ಎಂದರು.

ಸಾರ್ವಜನಿಕರಿಗೆ ಫನ್​​ ರನ್​

Merathan 2
21 ಕಿಮೀ, 10 ಕಿಮೀ, 5 ಕಿಮೀ, 3 ಕಿಮೀ ಮೆರಾಥಾನ್​ ಆಯೋಜಿಸಲಾಗಿತ್ತು. ಮಕ್ಕಳು, ಹಿರಿಯರು, ವಿಶೇಷ ಚೇತನರು ಹಾಗೂ ಸಾರ್ವಜನಿಕರಿಗಾಗಿ ಫನ್​ ರನ್​ ಆಯೋಜಿಸಲಾಗಿತ್ತು.

ಕೆನರಾ ಬ್ಯಾಂಕ್​ ವೃತ್ತ ಕಚೇರಿಯಿಂದ ಆರಂಭಗೊಂಡ ಓಟವು ಮಣಿಪಾಲದಿಂದ ಟ್ಯಾಪ್ಮಿ, ಪರ್ಕಳ, ಆತ್ರಾಡಿ ಮಾರ್ಗವಾಗಿ ಸಾಗಿ ಮತ್ತೆ ಮಣಿಪಾಲ ಕೆನರಾ ಬ್ಯಾಂಕ್​ ಕಚೇರಿ ಬಳಿ ಸಮಾಪ್ತಿಯಾಯಿತು. 5 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ವಿಜೇತರಿಗೆ ಒಟ್ಟು 5 ಲಕ್ಷ ರೂ.ಗೂ ಅಧಿಕ ಮೊತ್ತದ ಬಹುಮಾನ ನೀಡಲಾಯಿತು.

333
ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯ ಸುಧಾಕರ ಕೊಠಾರಿ, ಕೃಷ್ಣ್ಣಪ್ರಸಾದ, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಶಾಸಕ ಯಶ್​ಪಾಲ್​ ಸುವರ್ಣ, ಮಾಜಿ ಶಾಸಕ ಕೆ. ರುಪತಿ ಭಟ್​, ಕ್ಯಾಪ್ಟನ್​ ಗಣೇಶ ಕಾರ್ಣಿಕ್​, ಡಿವೈಎಸ್ಪಿ ಪ್ರಭು ಡಿ.ಟಿ., ಮಣಿಪಾಲ ಠಾಣೆಯ ಪೊಲೀಸ್​ ನಿರೀಕ್ಷಕ ಮಹೇಶಪ್ರಸಾದ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ ಕಾಂಚನ್​, ಅದಾನಿ ಗ್ರೂಫ್​ನ ಕಿಶೋರ್​ ಆಳ್ವ, ಮಣಿಪಾಲ ಟೆಕ್ನಲಾಜೀಸ್​ನ ರಾಜೇಶ್​ ಶೇಟ್​, ರೋಹನ್​ ಕಾರ್ಪೊರೇಶನ್​ನ ಮ್ಯಾಕ್ಸಿಂ ಲೋಬೋ, ಕಾರ್ಮಿಕ್​ ಡಿಸೈನ್​ ಪ್ರೆೃ.ಲಿ.ನ ರತ್ನಾಕರ, ಮೂರ್ತಿ ಮಣಿಪಾಲ, ಕಾರ್ಯಕ್ರಮ ಸಂಯೋಜಕರಾದ ಕೆನರಾ ರನ್ನರ್ಸ್​ ಕ್ಲಬ್​ನ ಸಚಿನ್​ ಶೆಟ್ಟಿ, ಸೂರಜ ಉಪ್ಪೂರು, ದುರ್ಗಾಪ್ರಸಾದ್​, ವಿಶಾಲ ಸಿಂಗ್​, ರೋಹಿತ್​ ಇನ್ನಿತರರು ಉಪಸ್ಥಿತರಿದ್ದರು.

ಸೌಜನ್ಯಾ ಹೆಗ್ಡೆ ಮತ್ತು ಮೇಜರ್​ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net