ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

Deputy Commissioner Dr. Kumar Meeting Mandya
Published on

ಮಂಡ್ಯ: ಅರ್ಹ ಫಲಾನುಭವಿಗಳಿಗೆ ಸ್ಲಂ ಬೋರ್ಡ್‌ನಲ್ಲಿ ನಿರ್ಮಿಸಿರುವ ಮನೆಗಳ ಹಕ್ಕುಪತ್ರಗಳನ್ನು ನೀಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಾಗಮಂಗಲ ಪಟ್ಟಣದ ವಾರ್ಡ್ ನಂ.1 ವ್ಯಾಪ್ತಿಯ ಸುಭಾಷ್‌ಚಂದ್ರ ಬೋಸ್‌ನಗರ ಕೊಳಗೇರಿ ಪ್ರದೇಶದಲ್ಲಿ 226 ಮನೆಗೆ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸುವ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಎಂದರು.

ಕೊಳಗೇರಿಯ 9 ಎಕರೆ 39 ಗುಂಟೆ ಪ್ರದೇಶದಲ್ಲಿ 226 ಮನೆ ನಿರ್ಮಾಣಗೊಂಡಿದೆ. ಅಲ್ಲಿಯ ಮನೆಗಳಲ್ಲಿ ಅಕ್ರಮವಾಗಿ ವಾಸಿಸುವತ್ತಿರುವವರನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ. ಸ್ಲಂ ಬೋರ್ಡ್ ಪ್ರಕಾರ ಎಷ್ಟು ಜನ ಫಲಾನುಭವಿಗಳಿದ್ದಾರೆ. ಸ್ಲಂ ಬೋರ್ಡ್‌ಗೆ ಒಳಪಡದ ಎಷ್ಟು ಜನ ಫಲಾನುಭವಿಗಳಿದ್ದಾರೆಂದು ಪಟ್ಟಿ ಮಾಡಿ. ಅವರ ಆಧಾರ್‌ಸಂಖ್ಯೆ, ಹೆಸರು, ವಿಳಾಸ, ಕುಟುಂಬ ಸದಸ್ಯರು, ಅವರಿಗೆ ಇನ್ನಿತರೆ ನಿವೇಶನಗಳಿವೆಯೇ?. ಅವರು ಮೂಲ ನಿವಾಸಿಗಳೇ ಎಂದು ಪರೀಶೀಲನೆ ನಡೆಸಲು ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ, ಸ್ಲಂ ಬೋರ್ಡ್‌ನ ಕಾರ್ಯಪಾಲಕ ಇಂಜಿನಿಯರ್ ಒಳಗೊಂಡಂತೆ ತಂಡ ರಚಿಸಿ. ಜಿಪಿಎಸ್ ಫೋಟೋಗಳೊಂದಿಗೆ ಪ್ರತಿ ನಿವಾಸಕ್ಕೂ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಆದರ್ಶ್, ಯೋಗಾನಂದ, ಪುರಸಭೆ ಸದಸ್ಯ ನರಸಿಂಹ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net