ಉಪಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಪ್ರತಿಭಟನೆ

25Kanapur2
Published on

ಖಾನಾಪುರ: ರಾಜ್ಯದಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಅಗತ್ಯವಿದ್ದಲ್ಲಿ ಸಂವಿಧಾನದಲ್ಲಿ ಬದಲಾವಣೆ ತರುತ್ತೇವೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ತಾಲೂಕು ಬಿಜೆಪಿ ಟಕ ಮಂಗಳವಾರ ಪ್ರತಿಭಟನೆ ನಡೆಸಿತು. ಇಲ್ಲಿನ ಶಿವ ಸ್ಮಾರಕ ಚೌಕದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಪ್ರತಿಕೃತಿ ದಹಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ತಾಲೂಕಾಧ್ಯ ಬಸವರಾಜ ಸಾಣಿಕೊಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯ ಪ್ರಮೋದ ಕೊಚೇರಿ, ಮಾಜಿ ಶಾಸಕ ಅರವಿಂದ ಪಾಟೀಲ, ಸಂಜಯ್​ ಕುಬಾಲ್​, ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ್​, ಗುಂಡು ಟೋಪಿನಕಟ್ಟಿ, ಸುಂದರ ಕುಲಕರ್ಣಿ, ಸುರೇಶ ದೇಸಾಯಿ, ಚೇತನ ಮನೇರಿಕರ್​, ಪಂಡಿತ್​ ಒಗ್ಲೆ, ಕಿಶೋರ್​ ಹೆಂಬಾಳ್ಕರ್​, ಸಯಾಜಿ ಪಾಟೀಲ, ಪ್ರಶಾಂತ ಲಕ್ಕಿ ಬೆಲ್ಕರ್​, ಸಂಜಯ್​ ಕಂಚಿ, ಸದಾನಂದ ವಸೂರ್ಕರ್​, ರಾಜು ಕರಂಬಾಳ್ಕರ್​, ಮನೋಹರ ಕದಮ್​, ರವಿ ಬ್ಯಾಡ್ಜರ್​, ಪ್ರಕಾಶ ನೀಲ್ಕರ್​, ಮೋಹನ ಪಾಟೀಲ, ರಾಹುಲ್​ ಅಲ್ವಾನಿ, ಅಭಿಜಿತ್​ ಬಾಳೇಕುಂದ್ರಿ, ಪ್ರದಿಪ ಪವಾರ, ವಿಠ್ಠಲ ನಿಡಗಾಕರ್​, ಯಶವಂತ್​ ಗಾವ್ಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net