ಕನ್ನಡತ್ವದ ಜನಕ ಡೆಪ್ಯೂಟಿ ಚನ್ನಬಸಪ್ಪ

10 LXR-2
Published on

ಲಕ್ಷ್ಮೇಶ್ವರ: ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಡೆಪ್ಯೂಟಿ ಚನ್ನಬಸಪ್ಪ ಅವರು ಮಾಡುವ ಮೂಲಕ ಕನ್ನಡತ್ವದ ಜನಕರಾಗಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಇಂತಹ ಮಹನೀಯರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಸರ್ಕಾರ ಘೋಷಿಸಬೇಕು ಎಂದು ಪತ್ರಕರ್ತ ರಾಜು ಭೂಶೆಟ್ಟಿ ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಪಟ್ಟಣದ ದಿ. ಯುನಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾಸದ ಮಾತು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕನ್ನಡದಲ್ಲಿ ಶಿಕ್ಷಣ, ಸಾಹಿತ್ಯ ಪ್ರಸಾರದ ಉದ್ದೇಶದಿಂದ 1865ರಲ್ಲಿ ಮಾಸಪತ್ರಿಕೆ ಆರಂಭಿಸಿದ ಕೀರ್ತಿ ಡೆಪ್ಯೂಟಿ ಚನ್ನಬಸಪ್ಪನವರಿಗೆ ಸಲ್ಲುತ್ತದೆ. 158 ವರ್ಷದ ಹಿಂದೆಯೇ ಈ ಪತ್ರಿಕೆಯ ಸಂಪಾದಕೀಯದಲ್ಲಿ ಕರ್ನಾಟಕ ಪದವನ್ನು ಬಳಕೆ ಮಾಡಿದ್ದರು ಎಂದು ಹೇಳಿದರು.

ಹಿರಿಯ ಚಿಂತಕ ಎಂ. ಸಿದ್ದಲಿಂಗಯ್ಯ ಮಾತನಾಡಿ, ಡೆಪ್ಯೂಟಿ ಚನ್ನಬಸಪ್ಪ ಆರಂಭಿಸಿದ ಧಾರವಾಡ ಕನ್ನಡ ಗಂಡು ಮಕ್ಕಳ ತರಬೇತಿ ಕಾಲೇಜ್ ಇಂದಿನ ಡಯಟ್ ಕಾಲೇಜ್. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ ಈ ಕಾಲೇಜ್ ಮಹೋನ್ನತ ಕೊಡುಗೆ ನೀಡಿದೆ ಎಂದರು.

ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಜಾನನ್ನವರ, ಎಂ.ಕೆ. ಕಳ್ಳಿಮಠ, ಎನ್.ಆರ್. ಸಾತಪುತೆ, ನಿಂಗಪ್ಪ ಗೊರವರ, ಕೆ.ಎಸ್. ಕೊಡ್ಲಿವಾಡ, ಶಿವಪ್ರಕಾಶ ಗುಡಿಗೇರಿ, ವಿನಾಯಕ ಘೋರ್ಪಡೆ, ಶಶಿಕಾಂತ ಕುಂಬಾರ, ವಿ.ಎಂ. ಹೂಗಾರ, ಲಕ್ಷ್ಮಣ ಪೂಜಾರ, ಫಕೀರೇಶ ವಾಲ್ಮೀಕಿ ಹಾಜರಿದ್ದರು. ಯೂನಿಕ್ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ದೇಶಪಾಂಡೆ ಸ್ವಾಗತಿಸಿದರು. ಭೂಮಿಕಾ ನೇಕಾರ ಪ್ರಾರ್ಥಿಸಿದರು. ಶಬೀನಾ ಯಲಿಗಾರ, ಪಂಚಮಿ ಅಂಬಿಗೇರ ಕನ್ನಡ ಗೀತ ಗಾಯನ ನಡೆಸಿಕೊಟ್ಟರು. ಮಂಜುಳಾ ಗೊರವರ, ಮಂಜುನಾಥ ಚಾಕಲಬ್ಬಿ, ನಾಗರಾಜ ಮಜ್ಜಿಗುಡ್ಡ, ಎಸ್.ಬಿ. ಅಣ್ಣಿಗೇರಿ, ಸಂಗಮೇಶ ಅಂಗಡಿ ನಾಗರಾಜ ಪೂಜಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net