ಠೇವಣಿದಾರರ ಶಿಕ್ಷಣ-ಜಾಗೃತಿ ಶಿಬಿರ

deap
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಧಾರವಾಡ ಲೀಡ್ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ) ವತಿಯಿಂದ ನಗರದ ಬ್ಯಾಂಕರ್ಸ್ ಭವನದಲ್ಲಿ ಶುಕ್ರವಾರ ಅನ್​ಕ್ಲೇಮ್್ಡ ಬ್ಯಾಂಕ್ ಠೇವಣಿಗಳ ಬಗ್ಗೆ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ಶಿಬಿರ (ಡಿಇಎಪಿ) ಏರ್ಪಡಿಸಲಾಗಿತ್ತು.

ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ ಮಾರ್ಗಸೂಚಿಯಡಿ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ ಸಹಯೋಗದೊಂದಿಗೆ ಶಿಬಿರ ಆಯೋಜಿಸಲಾಗಿತ್ತು. ವಿವಿಧ ಬ್ಯಾಂಕ್​ಗಳು ಮತ್ತು ಎಲ್​ಐಸಿಯಿಂದ ಸಂಯೋಜಕರು ಪಾಲ್ಗೊಂಡು ಕಳೆದ 10 ವರ್ಷಗಳಿಗಿಂತ ಹೆಚ್ಚು ಕಾಲ ನಿಷ್ಕ್ರೀಯವಾಗಿರುವ ಅಥವಾ ಕ್ಲೇಮ್ ಮಾಡದ ಖಾತೆಗಳು ಮತ್ತು ಠೇವಣಿ ವಿವರಗಳನ್ನು ನೀಡಿದರು.

ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಗಡಾದ ಮಾತನಾಡಿ, ಎಲ್ಲ ಬ್ಯಾಂಕ್, ವಿಮೆ ಮತ್ತು ಇತರ ಇಲಾಖೆ ಶಾಖೆಗಳಲ್ಲಿ ಡಿಸೆಂಬರ್ 31ರವರೆಗೆ ಶಿಬಿರ ಮುಂದುವರಿಯಲಿದೆ. ಈ ಶಿಬಿರದಲ್ಲಿ ಭಾಗವಹಿಸಲು ಸಾಧ್ಯವಾಗದ ಹಕ್ಕುದಾರರು ತಮ್ಮ ಸಂಬಂಧಿತ ಬ್ಯಾಂಕ್ ಶಾಖೆಗಳಿಗೆ ನೇರವಾಗಿ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ತಮ್ಮ ಬಾಕಿ ಠೇವಣಿಯನ್ನು ವಸೂಲು ಮಾಡಿಕೊಳ್ಳಬಹುದೆಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net