ಕಾನೂನು ಬಾಹೀರ ಚಟುವಟಿಕೆ, ಇಬ್ಬರ ಗಡಿಪಾರು

00000
Published on

ಶಿವಮೊಗ್ಗ: ರೌಡಿ ಚಟುವಟಿಕೆಗಳಲ್ಲಿ ಭಾಗಿ ಸಾರ್ವಜನಿಕರ ಆಸ್ತಿ ಮತ್ತು ಜೀವ ಹಾನಿ ಪಡಿಸುವ ಆತಂಕದಿಂದ ಇಬ್ಬರನ್ನು ಶಿವಮೊಗ್ಗ ಜಿಲ್ಲೆಯಿಂದ ಆರು ತಿಂಗಳು ಗಡಿಪಾರು ಮಾಡಿ ಸಾಗರ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಆದೇಶ ಹೊರಡಿಸಿದ್ದಾರೆ.

ಶಿರಾಳಕೊಪ್ಪ ಗಾಂಧಿನಗರದ ಸುನೀಲ್‌ಕುಮಾರ್ (54) ಮತ್ತು ಹಳ್ಳೂರು ಕೇರಿ ಹುಸೇನ್ ರಸ್ತೆಯ ಅಬ್ದುಲ್ ಮುನಾಫ್ ಅಲಿಯಾಸ್ ಸ್ಟಾರ್ ಮುನ್ನಾ (48) ಎಂಬುವರನ್ನು ಕ್ರಮವಾಗಿ ಗದಗ ಮತ್ತು ವಿಜಯಪುರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಇಬ್ಬರೂ ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಸುನೀಲ್‌ಕುಮಾರ್ ಮೇಲೆ 8 ಮತ್ತು ಅಬ್ದುಲ್ ಮುನಾಫ್ ಮೇಲೆ 10 ಪ್ರಕರಣಗಳು ದಾಖಲಾಗಿದ್ದು ಹಲವು ಬಾರಿ ಎಚ್ಚರಿಕೆ ನೀಡಿದರೂ ಇಬ್ಬರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾನೂನು ಬಾಹೀರ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಶಿರಾಳಕೊಪ್ಪ ಠಾಣೆಯ ಪಿಎಸ್‌ಐ ಮಂಜುನಾಥ ಎಸ್ ಕುರಿ ಅವರು ನೀಡಿದ ವರದಿ ಮೇರೆಗೆ 2023ರ ಮಾ.7ರಿಂದ ಸೆಪೆಂಬರ್ 7ರವರೆಗೆ ಆರು ತಿಂಗಳು ಗಡಿಪಾರು ಮಾಡಿ ಸಾಗರ ಎಸಿ ಪಲ್ಲವಿ ಸಾತೇನಹಳ್ಳಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net