ಅತ್ಯಾಚಾರಿಗಳನ್ನು ಗಡಿಪಾರು ಮಾಡಿ

15-02-Shiva-6
ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ದುಷ್ಕರ್ಮಿಗಳನ್ನು ಬಂಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರ ದಲಿತ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಪದಾಕಾರಿಗಳಾದ ಹನುಮಂತಪ್ಪ ಮನ್ನಾಪುರ, ಬುದ್ರಪ್ಪ ಮರಡ್ಡಿ, ವಿಜಯರಾಣಿ, ವೆಂಕಟೇಶ ಜಾಲಹಳ್ಳಿ, ಸುನಿಲಕುಮಾರ, ರವಿಚಂದ್ರ ಗುಂಟ್ರಾಳ, ಭೀಮಣ್ಣ ಅಂಜಳ, ಲಿಂಗಪ್ಪ ಗೌಡೂರು, ಸಂಗಪ್ಪ ಮಶಿಹಾಳ ಇದ್ದರು.
Published on

ರಾಯಚೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಮ್ಮಲೂರು ಗ್ರಾಮದಲ್ಲಿ ದಲಿತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಸಿ ಗಡಿಪಾರು ಮಾಡುವಂತೆ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಒಕ್ಕೂಟದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಗುರುವಾರ ಮನವಿ ಸಲ್ಲಿಸಿ, ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಅತ್ಯಾಚಾರ ತಡೆಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿಯನ್ನು ಹಾಡು ಹಗಲೇ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗುವಂತೆ ಮಾಡಿದೆ. ಜತೆಗೆ ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಗಂಡನಿಗೆ ತಳಿಸಿ ಹೆಂಡತಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಲಾಗಿದೆ.
ಗೃಹ ಸಚಿವರು ಕೂಡಲೇ ಘಟನೆಗೆ ಸಂಬಂಸಿದ ದುಷ್ಕರ್ಮಿಗಳನ್ನು ಬಂಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಒಕ್ಕೂಟದ ಪದಾಕಾರಿಗಳಾದ ಹನುಮಂತಪ್ಪ ಮನ್ನಾಪುರ, ಬುದ್ರಪ್ಪ ಮರಡ್ಡಿ, ವಿಜಯರಾಣಿ, ವೆಂಕಟೇಶ ಜಾಲಹಳ್ಳಿ, ಸುನಿಲಕುಮಾರ, ರವಿಚಂದ್ರ ಗುಂಟ್ರಾಳ, ಭೀಮಣ್ಣ ಅಂಜಳ, ಲಿಂಗಪ್ಪ ಗೌಡೂರು, ಸಂಗಪ್ಪ ಮಶಿಹಾಳ, ಅಬ್ರಾಹಂ ಕಮಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net