

ಕೆರೂರ: ಪರಿಸರದಲ್ಲಿ ವಾಯುಮಾಲಿನ್ಯ ಹಾಗೂ ರಸಾಯನಿಕ ವಸ್ತುಗಳ ಬಳಕೆಯಿಂದ ಓರೆನ್ ಪದರು ಸವಕಳಿಯಾಗುತ್ತದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವ ಡಾ.ಟಿ.ಬಿ.ಅಳ್ಳೊಳ್ಳಿ ಹೇಳಿದರು.
ಸಮೀಪದ ಕೆರಕಲಮಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಸರ್ಕಾರಿ ಪ್ರೌಢಶಾಲೆ ಕೆರಕಲಮಟ್ಟಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಓರೆನ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಓರೆನ್ ಪದರು ಸವಕಳಿಯಿಂದ ಮಾನವರಿಗೆ ಹಲವಾರು ಪರಿಣಾಮಗಳು ಉಂಟಾಗುತ್ತವೆ. ಆದ ಕಾರಣ ಪರಿಸರ ನಾಶವಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದರು.
ವಿಜ್ಞಾನ ಶಿಕ್ಷಕ ಎಸ್.ವೈ.ಮಡಿವಾಳರ ಮಾತನಾಡಿ, ಓರೆನ್ ಪದರು ಭೂಮಿಯ ಮೇಲಿನ ಪ್ರಾಣಿಗಳನ್ನು ಮತ್ತು ಸಸ್ಯ ಸಂಪತ್ತನ್ನು ರಕ್ಷಣೆ ಮಾಡುತ್ತದೆ.
ಆದ್ದರಿಂದ ಓರೆನ್ ಪದರು ಹಾಳಾಗದಂತೆ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಹೇಳಿದರು.
ಮುಖ್ಯಶಿಕ್ಷಕ ಬಿ.ಎಚ್.ನದಾಫ್ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಾತಾವರಣದಲ್ಲಿ ಕ್ಲೋರ್ಲೋೋರೊ ಕಾರ್ಬನ್, ಸಲ್ಪರ್ ಡೈ ಆಕ್ಸೈಡ್, ಕಾರ್ಬನ್ ಡೈ ಆಕ್ಸೈಡ್ ಹೆಚ್ಚಳದಿಂದ ವಾತಾವರಣ ಕಲುಷಿತವಾಗಿದೆ.
ಇಂತಹ ಹಲವಾರು ರಸಾಯನಿಕ ವಸ್ತುಗಳು ಓರೆನ್ ಪದರು ನಶಿಸಿ ಹೋಗುವಂತೆ ಮಾಡುತ್ತದೆ ಎಂದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಭಾಗ್ಯಶ್ರೀ ಬಸವರಾಜ ಅಂಕಲಗಿ (ಪ್ರಥಮ), ಶರತ್ ಸಿದ್ದಪ್ಪ ಬೂದಿನಗಡ (ದ್ವಿತೀಯ), ಚೈತ್ರಾ ಬಸವರಾಜ ಮ್ಯಾಗಿನಮನಿ ಹಾಗೂ ಶ್ರೀಧರ ಯಮನಪ್ಪ ಕಂಬಾರ (ತೃತೀಯ) ಅವರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ವಿತರಿಸಲಾಯಿತು.
ಕುಮಾರಿ ಕವನ ಬಡಿಗೇರ ಪ್ರಾರ್ಥನೆ ಹಾಡಿದರು. ಪಿ.ಬಿ.ಭಜಂತ್ರಿ ಸ್ವಾಗತಿಸಿದರು. ಸಹಶಿಕ್ಷಕ ಪಿ.ಬಿ.ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ಟಿ.ಟಿ.ನಾರಾಯಣಕರ ವಂದಿಸಿದರು.
ಸಹಶಿಕ್ಷಕಿಯರಾದ ಆರ್.ವೈ.ಬದರಿ, ಪಿ.ಎಚ್.ಜಾಲಿಹಾಳ, ದೈಹಿಕ ಶಿಕ್ಷಣ ಶಿಕ್ಷಕಿ ಆರ್.ಟಿ.ಕಕರಟ್ಟಿ, ಬಾಗಲಕೋಟೆ ತೋಟಗಾರಿಕೆ ವಿವಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ಈರಣ್ಣ ಬುಳ್ಳಾ, ಆಶ್ಿ ಬಾಗವಾನ, ಗಂಗನಗೌಡ ಪಾಟೀಲ ಭಾಗವಹಿಸಿದ್ದರು.