ಅಗ್ನಿವೀರ ವಾಯು ಪ್ರಶಿಕ್ಷಾರ್ಥಿಗಳ ನಿರ್ಗಮನ ಪಥಸಂಚಲನ

Screenshot_2024-06-01-23-40-49-91.jpg
Published on

ಬೆಳಗಾವಿ: ಪ್ರತಿಯೊಂದು ಕಾರ್ಯ ದೇಶ ಸೇವೆಗಾಗಿ ಎನ್ನುವ ಘೋಷವಾಕ್ಯದೊಂದಿಗೆ ಬೆಳಗಾವಿ ಸಾಂಬ್ರಾ ವಾಯುದಳ ಕೇಂದ್ರದಲ್ಲಿ 22 ವಾರಗಳ ಕಾಲ ತರಬೇತಿ ಪಡೆದ 2,614 ಅಗ್ನಿವೀರ ವಾಯು ಪ್ರಶಿಕ್ಷಾರ್ಥಿಗಳ ನಿರ್ಗಮನ ಪಥಸಂಚಲನ ಶನಿವಾರ ನಡೆಯಿತು.

ಏರ್ ವೈಸ್ ಮಾರ್ಷಲ್ ಆರ್. ರವಿ ಶಂಕರ ಅವರು ಆಗಮಿಸಿದ್ದರು. ಈ ವೇಳೆ ಅವರು ತರಬೇತಿ ಪೂರ್ಣಗೊಳಿಸಿದ ಪ್ರಶಿಕ್ಷಣಾರ್ಥಿಗಳಿಗೆ ಭವಿಷ್ಯಕ್ಕೆ ಶುಭ ಹಾರೈಸಿದರು. ಇನ್ನು ಅಗ್ನಿವೀರ ವಾಯುಗಳಿಗೆ ನೀಡಿದ ಜವಾಬ್ದಾರಿಯನ್ನು ಶ್ರದ್ಧೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಪೂರ್ಣಗೊಳಿಸಬೇಕು. ವರಿಷ್ಠರು ಕಲಿಸಿ ಕೊಡುವ ಕೌಶಲ್ಯವನ್ನು ಕರಗತಗೊಳಿಸಿಕೊಂಡು ದೇಶ ಸೇವೆಗೆ ಅಣಿಯಾಗಬೇಕು. ಅಲ್ಲದೇ ದೇಶಸೇವೆಗಾಗಿ ಕಳುಹಿಸಿಕೊಟ್ಟ ವಾಯು ಅಗ್ನಿವೀರರ ತಂದೆ- ತಾಯಿಯರ ಕಾರ್ಯವನ್ನು ಅವರು ಪ್ರಶಂಸಿಸಿದರು.

ನಂತರ ವಾಯು ಅಗ್ನಿವೀರರ ನಿರ್ಗಮನ ಪಥಸಂಚಲನ ನಡೆಯಿತು. ಈ ಸಂದರ್ಭದಲ್ಲಿ ವಾಯು ಅಗ್ನಿವೀರರು ಆಕರ್ಷಕ ಪ್ರದರ್ಶನ

ನೀಡಿದರು. ಇದು ನೋಡುಗರನ್ನು ಬೆರಗಾಗುವಂತೆ ಮಾಡಿತು. ಪ್ರಶಿಕ್ಷಣ ಪೂರ್ಣಗೊಳಿಸಿದ ಅಗ್ನಿವೀರ ವಾಯು ವಿವೇಕ್ ಸಿಂಗ್ ರಾವತ್ ಅವರಿಗೆ ಬೆನ್ಸ್ ಇನ್ ಅಕಾಡೆಮಿಕ್ಸ, ಅಗ್ನಿವೀರ ವಾಯು ನೀತೀಶ್ ಅವರಿಗೆ ಬೆಸ್ಟ್ ಇನ್ ಗೌಂಡ್ ಸರ್ವೀಸ್ ಟ್ರೇನಿಂಗ್ ಮತ್ತು ಅಗ್ನಿವೀರ ವಾಯು ವಿವೇಕ್ ರಾವತ್ ಅವರಿಗೆ ಬೆಸ್ಟ್ ಅಲ್ ರೌಂಡರ್ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಾಯು ಅಗ್ನಿವೀರರ ಪಥಸಂಚಲನವನ್ನು ನೋಡಲು ಎರಡು ಕಣ್ಣುಗಳು ಸಾಲದಾಗಿತ್ತು. ವಾಯು ಅಗ್ನಿ ವೀರರ ಕುಟುಂಬದವರಿಗೆ ಈ ಕ್ಷಣ ಅತ್ಯಂತ ಅವಿಸ್ಮರಣೀಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net