

ಮಂಡ್ಯ: ಈಗ ಜಗತ್ತು ಡಿಜಿಟಲ್ನತ್ತ ಮುಖ ಮಾಡಿದೆ. ಇದಕ್ಕೆ ಅಂಚೆ ಇಲಾಖೆ ಕೂಡ ಹೊರತಾಗಿಲ್ಲ ಎಂದು ಅಂಚೆ ಇಲಾಖೆಯ ಅಧೀಕ್ಷಕ ಎಂ.ಲೋಕನಾಥ್ ಹೇಳಿದರು.
ನಗರದ ವಾಸವಿ ಫಂಕ್ಷನ್ ಹಾಲ್‌ನಲ್ಲಿ ರಾಷ್ಟ್ರೀಯ ಅಂಚೆ ನೌಕರರ ಸಂಘದ ಕರ್ನಾಟಕ ವಲಯ ಹಾಗೂ ಮಂಡ್ಯ ವಿಭಾಗೀಯ ಸಂಘಟನೆ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ವಿಭಾಗೀಯ ಕಾರ್ಯದರ್ಶಿಗಳ ವಿಶೇಷ ಕಾರ್ಯಾಗಾರ ಹಾಗೂ ಜಂಟಿ ಕಾರ್ಯಕಾರಿ ಸಮಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಚೆ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆ ಆಗಿ ಡಿಜಿಟಲ್ ಕ್ರಾಂತಿಯಾಗಿದೆ ಎಂದರು.
ಅಂಚೆ ಇಲಾಖೆಯಲ್ಲಿ ಸಾಕಷ್ಟು ಮಾರ್ಪಾಡಾಗಿದೆ. ಅದಕ್ಕೆ ಇಲಾಖೆ ನೌಕರರು ಹೊಂದಿಕೊಂಡು ಕೆಲಸ ನಿರ್ವಹಿಸಿ ಸಾರ್ವಜನಿಕ ಸೇವೆ ಮಾಡಬೇಕು. ಈಗಾಗಲೇ ಡಿಜಿಟಲ್ಗೆ ಹೊಂದಿಕೊಂಡು ಕೆಲಸ ಮಾಡುತ್ತಿರುವವರು ಸಾಕಷ್ಟು ನೌಕರರು ಇದ್ದಾರೆ. ಇಲಾಖೆಯಲ್ಲಿ ಇದೇ ತರಹದ ಕಾರ್ಯಾಗಾರಗಳು ಆಯೋಜನೆಗೊಳ್ಳುತ್ತಿರಬೇಕು ಎಂದು ಸಲಹೆ ನೀಡಿದರು.
ಸಂಘದ ಪದಾಧಿಕಾರಿಗಳಾದ ರಾಜೇಂದ್ರಕುಮಾರ್, ಸುರೇಶ್‌ಗುಪ್ತ, ಡಿ.ತ್ಯಾಗರಾಜನ್, ಡಿ.ಬಸವರಾಜು, ಶ್ರೀಕಾಂತ್, ಬಿ.ಟಿ.ಹರೀಶ್, ಡಿ.ಎನ್.ನರಸಿಂಹಮೂರ್ತಿ ಇತರರಿದ್ದರು.