ಭೂಮಿ ವಶಕ್ಕೆ ಪಡೆದ ಅರಣ್ಯ ಇಲಾಖೆ, ಒತ್ತುವರಿಯಾಗಿದ್ದ 35 ಎಕರೆಯಲ್ಲಿ ಗಿಡ ನೆಟ್ಟ ಅಧಿಕಾರಿಗಳು

IMG20200817133338
Published on

ಆನೇಕಲ್: ಬನ್ನೇರುಘಟ್ಟ ಕಾಡಂಚಿನ ಭೂತಾನಹಳ್ಳಿಯಲ್ಲಿ ಒತ್ತುವರಿಯಾಗಿದ್ದ 35 ಎಕರೆ ಅರಣ್ಯ ಭೂಮಿಯನ್ನು ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದರು.

ಒತ್ತುವರಿದಾರರ ವಿರುದ್ಧ ದಾಖಲಾಗಿದ್ದ ಪ್ರಕರಣ ವಿಚಾರಿಸಿದ ಹೈಕೋರ್ಟ್, ಅರಣ್ಯ ಇಲಾಖೆ ಪರ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದು ಗಿಡಗಳನ್ನು ನೆಟ್ಟರು.

ಸುಮಾರು 350 ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ಕೆಲ ಜನಪ್ರತಿನಿಧಿಗಳು, ರೈತರು, ಪ್ರತಿಷ್ಠಿತ ಕಾಲೇಜು ಆಡಳಿತ ಮಂಡಳಿ ಒತ್ತುವರಿ ಮಾಡಿಕೊಂಡಿತ್ತು.

ಬೆಂಗಳೂರು ದಕ್ಷಿಣ ಎಸಿಎಫ್ ಜಿ.ವೆಂಕಟೇಶ್, ಕಗ್ಗಲೀಪುರ ಆರ್‌ಎ್ಓ ಗೋಪಾಲ್, ಆನೇಕಲ್ ವಲಯ ಅರಣ್ಯಾಧಿಕಾರಿ ಎಸ್.ಆರ್ ಕೃಷ್ಣ ನೇತೃತ್ವದಲ್ಲಿ ತೆರವು ಮಾಡಲಾಯಿತು.

ಕಗ್ಗಲಿಪುರ, ಕೆ.ಆರ್ ಪುರಂ, ಬನ್ನೇರುಘಟ್ಟ ಅರಣ್ಯ ಅಧಿಕಾರಿಗಳು ಜಂಟಿಯಾಗಿ ಕಾರ‌್ಯಾಚರಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಒತ್ತುವರಿ ಮಾಡಿದ ಅರಣ್ಯಭೂಮಿ ವಶಕ್ಕೆ ಪಡೆಯುವುದಾಗಿ ಆನೇಕಲ್ ವಲಯ ಅರಣ್ಯ ಅಧಿಕಾರಿ ಕೃಷ್ಣ ತಿಳಿಸಿದರು.

35 ಎಕರೆ ಇಲಾಖೆ ಸುಪರ್ದಿಗೆ: ಭೂತಾನಹಳ್ಳಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದಿದ್ದ ಜಾಗ ಉಳಿಸಿಕೊಳ್ಳಲು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಜತೆಗೆ ಅರಣ್ಯ ಇಲಾಖೆಯೂ ಪ್ರಕರಣ ದಾಖಲಿಸಿತ್ತು. ಕೇಸ್ ವಜಾ ಆಗಿದ್ದ ಹಿನ್ನೆಲೆಯಲ್ಲಿ ಭೂಮಿ ವಶಕ್ಕೆ ಪಡೆಯಲಾಗಿದೆ.

ಅರಣ್ಯಭೂಮಿ ಒತ್ತುವರಿಯಲ್ಲಿ ರೈತರಿಗಿಂತ ಬಹುತೇಕ ಜನಪ್ರತಿನಿಧಿಗಳು, ಬಲಾಢ್ಯರು, ಕಾಲೇಜುಗಳ ಮಾಲೀಕರು, ಪೊಲೀಸ್ ಅಧಿಕಾರಿಗಳು ಇರುವುದು ಕಂಡುಬಂದಿದ್ದು ಯಾರೇ ಆಗಿದ್ದರೂ ಅರಣ್ಯ ಭೂಮಿ ಬಿಡುವ ಪ್ರಶ್ನೆಯೇ ಇಲ್ಲ. ಜಿ.ವೆಂಕಟೇಶ್, ಬೆಂ.ದಕ್ಷಿಣ ಎ.ಸಿ.ಎ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net