ಕೃಷಿ ಇಲಾಖೆ ಫೋನ್ ಇನ್ ಕಾರ್ಯಕ್ರಮ

3 ckm 1
ಚಿಕ್ಕಮಗಳೂರಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ರೈತರೊಂದಿಗೆ ಫೋನ್ ಇನ್ ಕಾರ್ಯಕ್ರಮ ನಡೆಸಲಾಯಿತು. ಜಂಟಿ ಕೃಷಿ ನಿರ್ದೇಶಕಿ ಸುಜಾತಾ, ಮುನೇಗೌಡ, ಶ್ರೀಶೈಲಾ, ಗೀತಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕರ್ನಾಟಕ ರೈತ ಸುರಕ್ಷಾ ಭೀಮಾ ಯೋಜನೆಯಡಿ ಭತ್ತ, ರಾಗಿ, ಮುಸುಕಿನ ಜೋಳ ಬೆಳೆಗಳ ನೋಂದಣಿಯನ್ನು ಆಗಸ್ಟ್ ೧೬ ಒಳಗಾಗಿ ಎಲ್ಲ ರೈತರು ನೋಂದಣಿ ಮಾಡಿಕೊಳ್ಳುವಂತೆ ಚಿಕ್ಕಮಗಳೂರು ಸಹಾಯಕ ಕೃಷಿ ನಿರ್ದೇಶಕಿ ಸುಜಾತ ತಿಳಿಸಿದರು.

ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡದಿದ್ದಲ್ಲಿ ತಾಂತ್ರಿಕ ತೊಂದರೆಯುAಟಾಗುತ್ತದೆ. ಇಲಾಖೆಯಿಂದ ದೊರೆಯುವ ಸವಲತ್ತುಗಳಿಂದ ವಂಚಿತರಾಗುತ್ತಾರೆ. ಹಾಗಾಗಿ ರೈತರು ಖಾಸಗಿ ನಿವಾಸಿಗಳ ಸಹಯೋಗದೊಂದಿಗೆ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಛಾಯಾಚಿತ್ರವನ್ನು ಬೆಳೆ ಸಮೀಕ್ಷೆ ಬೆಳೆ ಆ್ಯಪ್‌ನಲ್ಲಿ ನಿಗಧಿತ ಸಮಯದಲ್ಲಿ ಅಪ್‌ಲೋಡ್ ಮಾಡಬೇಕು. ಅಲ್ಲದೇ ಅಪ್‌ಲೋಡ್ ಮಾಡಲು ಇಲಾಖಾಧಿಕಾರಿಗಳ ಸಹಾಯ ಪಡೆಯಬಹುದು ಎಂದು ಫೋನೀ ಗ್ರೂಫ್ ಟಾಕ್ ಮೂಲಕ ರೈತರಿಗೆ ತಿಳಿಸಿದರು.
೨೦೨೪-೨೫ನೇ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯಡಿ ಉಳುಮೆಯಿಂದ ಕೊಯ್ಲಿನವರೆಗೆ ಉಪಯುಕ್ತವಿರುವ ಮಿನಿ ಟ್ರಾÈ್ರಕ್ಟರ್‌ಗಳು, ಪವರ್ ಟಿಲ್ಲರ್‌ಗಳು, ಭೂಮಿ ಸಿದ್ಧತೆ ಉಪಕರಣಗಳು, ನಾಟಿ ಮತ್ತು ಬಿತ್ತನೆ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ಇಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು, ಬೆಳೆ, ಕಟಾವು/ಒಕ್ಕಣೆ ಯಂತ್ರಗಳನ್ನು ಸಹಾಯಧನದಲ್ಲಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸೂಕ್ಷö್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕಗಳನ್ನು ಶೇ. ೯೦ರ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ. ಇದಲ್ಲದೆ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವು ಉತ್ತಮ ಭತ್ತ ಬೆಳೆದ ರೈತರಿಗೆ ಕೃಷಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಕುರಿತು ಅರ್ಜಿ ಆಹ್ವಾನಿಸಲಾಗುತ್ತದೆ. ಕೃಷಿ ಪ್ರಶಸ್ತಿಗೆ ಅರ್ಜಿಯನ್ನು ಆನ್‌ಲೈನ್ ಮೂಲಕ ಕರೆಯಲಾಗುತ್ತಿದ್ದು, ರೈತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ರೈತರು ತಮ್ಮ ಪಹಣಿ ಮತ್ತು ಆಧಾರ್ ಕಾರ್ಡ್ಗಳನ್ನು ರೈತ ಸಂಪರ್ಕ ಕೇಂದ್ರಕ್ಕೆ ತಂದು ತಂತ್ರಾAಶದಲ್ಲಿ ನೊಂದಣಿ ಮಾಡಿಸಬೇಕು. ಕಳೆದ ವರ್ಷ ನೋಂದಾಣಿಗೆ ಶುಲ್ಕ ಪಾವತಿಸಬೇಕಿತ್ತು. ಆದರೆ ಈ ಬಾರೀ ನೋಂದಾಣಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಉಚಿತವಾಗಿ ನೋಂದಣಿ ಮಾಡಿಕೊಡಲಾಗುವುದು ಎಂದು ಹೇಳಿದರು.
ಫೋನೀ ಗ್ರೂಪ್ ಟಾಕ್‌ನಲ್ಲಿ ಉಪ ಕೃಷಿ ನಿರ್ದೇಶಕ ಮುನೇಗೌಡ, ತಾಂತ್ರಿಕ ಅಧಿಕಾರಿ ಶ್ರೀಶೈಲಾ, ಗೀತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net