ಅನ್ಯ ಇಲಾಖೆ ಕೆಲಸದ ಜವಾಬ್ದಾರಿ ಸಲ್ಲ

26LNG01
Published on

ಲಿಂಗಸುಗೂರು: ಗ್ರಾಮ ಆಡಳಿತಾಧಿಕಾರಿಗಳಿಗೆ ತಾಂತ್ರಿಕ ಶ್ರೇಣಿ ಹುದ್ದೆಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳು ಎಸಿ ಕಚೇರಿ ಆವರಣದಲ್ಲಿ ಗುರುವಾರ ಕೈಗೆ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರು.

ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿದ ಸಂಯೋಜನೆ, ಇ-ಆಫೀಸ್, ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕುಂ, ಹಕ್ಕುಪತ್ರ, ನಮೂನೆ 1ರಿಂದ 5 ರ ವೆಬ್ ಅಪ್ಲಿಕೇಷನ್, ಪೌತಿ, ಸಂರಕ್ಷಣೆ, ಸಿ.ವಿಜಲ್ ಆ್ಯಪ್, ನವೋದಯ, ಗರುಡ ಆ್ಯಪ್, ಭೂಮಿ, ಎಲೆಕ್ಟ್-1, ವೋಟರ್ ಹೆಲ್ಪ್ ಲೈನ್, ಬೆಳೆ ಸಮೀಕ್ಷೆ, ಪಿಎಂ ಕಿಸಾನ್ ವೆಬ್ ಸೈಟ್, ಕೃಷಿ ಗಣತಿ, ನೀರಾವರಿ ಗಣತಿ, ದಿಶಾಂಕ್ ಸೇರಿದಂತೆ ವಿವಿಧ ವೆಬ್, ಮೊಬೈಲ್ ತಂತ್ರಾಂಶಗಳ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಟೇಬಲ್, ಕುರ್ಚಿ, ಅಲ್ಮಾರಾ, ಮೊಬೈಲ್ ಫೋನ್, ಸಿಯುಜಿ ಮತ್ತು ಡೇಟಾ ವ್ಯವಸ್ಥೆ, ಗೂಗಲ್ ಕ್ರೋಮ್ ಬುಕ್, ಲ್ಯಾಪ್‌ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್ ವ್ಯವಸ್ಥೆ ಕಲ್ಪಿಸಬೇಕು. ಅನ್ಯ ಇಲಾಖೆಯ ಕೆಲಸಗಳನ್ನು ಕಂದಾಯ ಇಲಾಖೆ ನಿರ್ವಹಿಸುವ ಆದೇಶ ಹಿಂಪಡೆಯಬೇಕು. ಕಂದಾಯ ಇಲಾಖೆ ನೌಕರರ ಸೇವಾ ವಿಷಯಗಳಾದ ಪ್ರೊಬೇಷನರಿ, ಟೈಮ್ ಬಾಂಡ್, ವೈದ್ಯಕೀಯ ವೆಚ್ಚ ಮರುಪಾವತಿ, ಪದೋನ್ನತಿ, ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net