

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕುಶಲಕರ್ವಿುಗಳಿಗೆ ಎಲ್ಲ ರೀತಿಯಿಂದ ಸಹಾಯ ಮಾಡಲು ಇಲಾಖೆ ಬದ್ಧವಾಗಿದೆ ಎಂದು ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕಿ ದರ್ಶನಾ ರಾಘವ ಹೇಳಿದರು.
ಧಾರವಾಡದಲ್ಲಿ ಇತ್ತೀಚೆಗೆ ಲಘು ಉದ್ಯೋಗ ಭಾರತಿ, ರ್ಯಾಪಿಡ್ ಸಂಸ್ಥೆಯ ಸಹಯೋಗದೊಂದಿಗೆ ಕುಶಲಕರ್ವಿು ಕಾರ್ಡ್ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಹಿಳೆಯರಿಗಾಗಿ ಆಯೋಜಿಸಿದ್ದ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳಾ ಕುಶಲಕರ್ವಿುಗಳಿಗೆ ಕುಶಲಕರ್ವಿು ಕಾರ್ಡ್ನಿಂದ ಹೆಚ್ಚು ಅನುಕೂಲವಾಗಲಿದೆ. ಗೃಹ ಉದ್ಯಮದಿಂದ ಬೃಹತ್ ಉದ್ಯಮದವರೆಗೆ ಮಹಿಳೆ ಬೆಳೆವಣಿಗೆ ಸಾಧಿಸಬಹುದು ಎಂದರು.
ರ್ಯಾಪಿಡ್ ಸಂಸ್ಥೆಯ ಸಿಇಒ ಮಾಳವಿಕಾ ಕಡಕೋಳ ಮಾತನಾಡಿ, ಸಂಕಷ್ಟದಲ್ಲಿರುವ ಮಹಿಳೆಯರ ಸಬಲೀಕರಣಕ್ಕಾಗಿ ಸಂಸ್ಥೆ ಕಳೆದ 20 ವರ್ಷಗಳಿಂದ ಶ್ರಮಿಸುತ್ತಿದೆ. ಮಹಿಳೆಯರು ಸ್ವಸಾಮರ್ಥ್ಯದಿಂದ ಅಭಿವೃದ್ಧಿ ಸಾಧಿಸಲು ನೆರವು ನೀಡುತ್ತೇವೆ ಎಂದು ಹೇಳಿದರು.
ಲಘು ಉದ್ಯೋಗ ಭಾರತಿಯ ಧಾರವಾಡ ಜಿಲ್ಲಾ ಅಧ್ಯಕ್ಷ ಎಸ್.ಸಿ. ಪಾಟೀಲ ಮಾತನಾಡಿ, ಸಣ್ಣ ಕೈಗಾರಿಕೆಗಳಿಗೆ ಹಾಗೂ ಉದ್ಯಮಗಳಿಗೆ ವಿವಿಧ ಯೋಜನೆಗಳ ಮೂಲಕ ನೆರವು ನೀಡಲಾಗುವುದು. ಸ್ಥಳೀಯ ಕುಶಲಕರ್ವಿುಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸಹಕಾರ ನೀಡುವ ಉದ್ದೇಶದಿಂದ ಅಕ್ಟೋಬರ್ನಲ್ಲಿ ಗ್ರಾಮ ಶಿಲ್ಪಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹೇಮಾ ಬೆಟಸೂರ, ಅಪರ್ಣಾ ಪೂಜಾರಿ ಇತರರು ಇದ್ದರು.