

ರಾಯಬಾಗ: ಬಾಯಿ ಮತ್ತು ಹಲ್ಲಿನ ರಕ್ಷಣೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ಅಭಿಯಾನ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿಯ ಕೆಎಲ್ಇ ವಿಶ್ವನಾಥ ಕತ್ತಿ ಡೆಂಟಲ್ ಕಾಲೇಜ್ ಹಾಗೂ ಮರಾಠ ಮಂಡಳ ಕಾಲೇಜ್ ಸಹಯೋಗದಲ್ಲಿ
ಬುಧವಾರ ಹಮ್ಮಿಕೊಂಡಿದ್ದ ಉಚಿತ ಬಾಯಿ ಮತ್ತು ದಂತ ತಪಾಸಣೆ ಹಾಗೂ ದಂತ ಪಂಕ್ತಿ ಉಚಿತ ಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಪ್ಪ ಗಡೆದ ಪ್ರಾಸ್ತಾವಿಕ ಮಾತನಾಡಿ, ಉಚಿತ ದಂತ ಪಂಕ್ತಿ ಶಿಬಿರದಲ್ಲಿ 45 ವರ್ಷ ಮೇಲ್ಪಟ್ಟ 50 ಹಿರಿಯರಿಗೆ ದಂತ ಪಂಕ್ತಿ (ಹಲ್ಲಿನ ಸೆಟ್) ಹಾಕಲಾಗುತ್ತಿದೆ ಎಂದು ತಿಳಿಸಿದರು.
ಜಿ.ಕು.ಕ.ಅಧಿಕಾರಿ ಡಾ.ವಿಶ್ವನಾಥ ಭೋವಿ, ಜಿಲ್ಲಾ ಎನ್‌ಒಪಿಎಚ್ ಅಧಿಕಾರಿ ಡಾ.ಚಂದ್ರ ನಾಯಿಕ, ತಾಲೂಕು ಆಡಳಿತಾಧಿಕಾರಿ ಡಾ.ಎಸ್.ಎಂ.ಪಾಟೀಲ, ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ಚಿಕ್ಕೋಡಿ ಟಿ.ಎಚ್.ಒ ಡಾ.ಸುಕುಮಾರ ಬಾಗಾಯಿ, ದಂತ ವೈದ್ಯ ಡಾ.ಸಿದ್ದಾರ್ಥ ಮಗದುಮ್ಮ, ಡಾ.ಅಪ್ಪಾಸಾಹೇಬ ಹೆಗಡೆ, ಡಾ.ಶಾಂತಾರಾಮ ಬಾಗೇವಾಡಿ, ಡಾ.ಸದಾಶಿವ ಖನದಾಳೆ, ಡಾ.ಆರತಿ ಚಿನಕೋಟಿ, ಡಾ.ಎಸ್.ಎಂ.ಕರಗಾಂವೆ, ಡಾ.ಸುರೇಶ ಬೆಳಗಾಂವಕರ, ಡಾ.ಆನಂದ ತೋರೊ, ಡಾ.ವಿಠ್ಠಲ ಗೊಂಡೆ ಇತರರಿದ್ದರು.