ಕಟ್ಟೆಮಾರ್‌ನಲ್ಲಿ ದಂತ, ವೈದ್ಯಕೀಯ ಉಚಿತ ಶಿಬಿರ

dental
ಕಟ್ಟೆಮಾರ್‌ನಲ್ಲಿ ಶಿಬಿರವನ್ನು ಮೋಹನ್ ರಾಜ್ ಚೌಟ ಉದ್ಘಾಟಿಸಿದರು. ಡಾ.ಎಂ.ಎಂ.ದಯಾಕರ್, ಅರ್ಜುನ್ ಭಂಡಾರ್ಕರ್ ಮೊದಲಾದವರಿದ್ದರು.
Published on

ಬಂಟ್ವಾಳ: ತಾಲೂಕಿನ ಅಮ್ಟೂರು ಗ್ರಾಮದ ಶ್ರೀ ಮಂತ್ರದೇವತಾ ಜನಸೇವಾ ಟ್ರಸ್ಟ್ ಕಟ್ಟೆಮಾರ್ ಹಾಗೂ ಅಖಿಲ ಕರ್ನಾಟಕ ರಾಜ್ಯ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಜಂಟಿ ಆಶ್ರಯದಲ್ಲಿ, ದ.ಕ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಸಹಯೋಗದೊಂದಿಗೆ, ಕೆವಿಜಿ ದಂತ ಮಹಾವಿದ್ಯಾಲಯ ಸುಳ್ಯ, ಯೆನೆಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ನೇತೃತ್ವದಲ್ಲಿ ಶ್ರೀ ಮಂತ್ರದೇವತಾ ಕ್ಷೇತ್ರ ಸಾನ್ನಿಧ್ಯ ಕಟ್ಟೆಮಾರ್‌ನ ಧರ್ಮದರ್ಶಿ ಮನೋಜ್ ಕಟ್ಟೆಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ದಂತ ಹಾಗೂ ವೈದ್ಯಕೀಯ ಉಚಿತ ಶಿಬಿರ ನಡೆಯಿತು.

ಪುಂಜೋಳಿ ಮಾರುಗುತ್ತು ಮೋಹನ್ ರಾಜ್ ಚೌಟ ಉದ್ಘಾಟಿಸಿದರು. ಯೆನೆಪೋಯ ಮೆಡಿಕಲ್ ಕಾಲೇಜಿನ ನಿರ್ದೇಶಕಿ ಡಾ.ಅಶ್ವಿನಿ ಶೆಟ್ಟಿ, ದ.ಕ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಗಣೇಶ್ ಪ್ರಸಾದ್ ಮುದ್ರಾಜೆ, ಅಮ್ಟೂರು ಕೃಷ್ಣಮಂದಿರದ ಅಧ್ಯಕ್ಷ ರಮೇಶ್ ಕೆ, ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರಸಾದ್ ಕುಲಾಲ್, ಕೌಶಿಲ್ ಶೆಟ್ಟಿ , ಗಂಗಾಧರ ಟೈಲರ್, ವಿಕ್ಯಾತ್ ಶೆಟ್ಟಿ, ಸಂದೀಪ್, ಶೈಲೇಶ್ ಪೂಜಾರಿ, ನಾಗೇಶ್ ಕುಲಾಲ್, ನವೀನ್ ಪೂಜಾರಿ, ಶೇಖರ ಶೆಟ್ಟಿ, ಚಂದ್ರಶೇಖರ್ ರೈ, ಚೆನ್ನಪ್ಪ ಆರ್.ಕೋಟ್ಯಾನ್, ದಿನೇಶ್, ಮಧುಶ್ರೀ ಎಂ.ಡಿ, ಟ್ರಾಫಿಕ್ ಎಸ್‌ಐ ಸುಖೇಶ್ ಕೆ.ಪಿ, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ಸ್ಥಾಪಕ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ ಸ್ವಾಗತಿಸಿದರು. ಮನೋಜ್ ಕುಮಾರ್ ವಂದಿಸಿದರು. ಕಿಶೋರ್ ಸುವರ್ಣ ಮುಂಡ್ಲಿ ಕಾರ್ಯಕ್ರಮ ನಿರೂಪಿಸಿದರು.

ಸಹಾಯಧನ ಹಸ್ತಾಂತರ

ಸುಳ್ಯ ಕೆವಿಜಿ ಡೆಂಟಲ್ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಎಂ.ಎಂ.ದಯಾಕರ್ ಮತ್ತು ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಸ್ಥಾಪಕ ಅರ್ಜುನ್ ಭಂಡಾರ್ಕರ್ ಹಾಗೂ ಡಾ.ಎಂ.ಎಂ.ದಯಾಕರ್ ಅವರನ್ನು ಸನ್ಮಾನಿಸಲಾಯಿತು. ಸಹಾಯಧನ ನೀಡಲಾಯಿತು. ಶೈಕ್ಷಣಿಕ ಸಾಧಕ ಸಂದೇಶ್ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net