ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ದಂತ ತಪಾಸಣೆ

13 gkp 03
ಗೋಣಿಕೊಪ್ಪಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಶರತ್‌ಕುಮಾರ್ ಮಾತನಾಡಿದರು. ಆಂಟೋನಿ, ಬಾಲಕೃಷ್ಣ, ಕಾಂತರಾಜು, ಸಚಿನ್, ಆಶಿಕ್ ಚಂಗಪ್ಪ ಇದ್ದರು.
Published on

ಗೋಣಿಕೊಪ್ಪ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ವತಿಯಿಂದ ಮಂಗಳವಾರ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ದಂತ ವೈದ್ಯಕೀಯ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಸ್ಥೆಯ ಗೋಣಿಕೊಪ್ಪಲು ಘಟಕದ ಅಧ್ಯಕ್ಷ ಡಾ.ಶರತ್‌ಕುಮಾರ್, ಖಜಾಂಚಿ ಆಂಟೋನಿ, ಸೀನಿಯರ್ ಬಾಲಕೃಷ್ಣ, ಸೀನಿಯರ್ ಕಾಂತರಾಜು, ಸೀನಿಯರ್ ಸಚಿನ್, ದಂತ ವೈದ್ಯ ಆಶಿಕ್ ಚಂಗಪ್ಪ, ವಿರಾಜಪೇಟೆಯ ದಂತ ವೈದ್ಯ ಕಾಲೇಜಿನ ವೈದ್ಯರು ಪಾಲ್ಗೊಂಡಿದ್ದರು.

ಹಲ್ಲುಗಳ ರಕ್ಷಣೆ, ಸ್ವಚ್ಛತೆ ಕುರಿತು ವಿರಾಜಪೇಟೆಯ ದಂತ ವೈದ್ಯ ಕಾಲೇಜಿನ ವೈದ್ಯೆ ಕುಮಾರಿ ಕೀರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಾ ಬಾಲು, ಸದಸ್ಯ ಪ್ರಕಾಶ್, ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಮುಖ್ಯ ಶಿಕ್ಷಕ ಎಚ್.ಕೆ.ಕುಮಾರ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಿರತಂತರವಾಗಿ ನಡೆಯಬೇಕು ಎಂದರು. ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಕೆ.ಆರ್.ಶಾಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net