ಹಲ್ಲಿನ ಕುರಿತು ಕಾಳಜಿ ಅಗತ್ಯ

bhr 4 (1)
Published on

ಬಾಳೆಹೊನ್ನೂರು: ಮಕ್ಕಳು ಕಿರಿಯ ವಯಸ್ಸಿನಲ್ಲಿಯೇ ತಮ್ಮ ಹಲ್ಲಿನ ಕುರಿತು ಕಾಳಜಿ ವಹಿಸಬೇಕು ಎಂದು ದಂತ ವೈದ್ಯೆ ಶೀಬಾ ನಿಲೂಫರ್ ಹೇಳಿದರು.

ಲಯನ್ಸ್ ಕ್ಲಬ್‌ನಿಂದ ಸಂಗಮೇಶ್ವರಪೇಟೆಯ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ದಂತ ರಕ್ಷಣೆ ಕಾಳಜಿ ಶಿಬಿರದಲ್ಲಿ ಮಾತನಾಡಿ, ಮಾನವನ ದೇಹದಲ್ಲಿ ಹಲ್ಲುಗಳು ಪ್ರಮುಖ ಅಂಗವಾಗಿದ್ದು, ವಿದ್ಯಾರ್ಥಿಗಳು ತಮ್ಮ ಕಿರಿಯ ವಯಸ್ಸಿನಲ್ಲಿ ಹಲ್ಲಿನ ಕುರಿತು ಕಾಳಜಿ ವಹಿಸಿದರೆ ಭವಿಷ್ಯದ ದಿನಗಳಲ್ಲಿ ಉತ್ತಮ ಹಲ್ಲುಗಳು ಇರಲಿವೆ. ಕಿರಿಯ ವಯಸ್ಸಿನಲ್ಲಿ ಚಾಕೋಲೆಟ್, ಸಿಹಿ ಮುಂತಾದ ಹಾನಿಕಾರಕ ತಿನಿಸುಗಳನ್ನು ತಿಂದಲ್ಲಿ ಹಲ್ಲುಗಳು ಬೇಗ ಉದುರಿ ಹೋಗಲಿವೆ. ಹುಳುಕು ಹಲ್ಲಿನ ಸಮಸ್ಯೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ದಂತ ರಕ್ಷಣೆಯ ಕಾಳಜಿ ವಹಿಸಬೇಕು ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದಂತ ರಕ್ಷಣೆಯ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಶಿಬಿರ ಆಯೋಜಿಸಿದ್ದು, ದಂತ ವೈದ್ಯರು ತಿಳಿಸುವ ಸೂಚನೆಗಳನ್ನು ತಪ್ಪದೇ ಪಾಲಿಸಿ ಹಲ್ಲುಗಳನ್ನು ಕಾಪಾಡಿಕೊಳ್ಳಬೇಕು. ಹಲ್ಲುಗಳು ಮನುಷ್ಯನ ಮುಖ ಲಕ್ಷಣಕ್ಕೂ ಉತ್ತಮ ಅಂಗವಾಗಿದೆ ಎಂದರು.

ಪೂರ್ಣಪ್ರಜ್ಞಾ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ವಿ.ಮೇರುತುಂಗ, ಮುಖ್ಯಶಿಕ್ಷಕ ಜಯಪ್ರಕಾಶ್, ಸುನೀತಾ ಕುಮಾರಿ, ಲಯನ್ಸ್ ಕಾರ್ಯದರ್ಶಿ ಸುಧಾಕರ್, ಖಜಾಂಚಿ ಕೆ.ಸಿ.ರವೀಂದ್ರ, ವಲಯ ಅಧ್ಯಕ್ಷ ಎಂ.ಡಿ.ಶಿವರಾಮ್, ಪೂರ್ವಾಧ್ಯಕ್ಷ ಎಂ.ಆರ್.ಮಂಜುನಾಥ್, ಮಂಜುನಾಥ್ ತುಪ್ಪೂರು, ವಿಜಯೇಂದ್ರ, ರಾಜಪ್ಪಗೌಡ, ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net