ಹಲ್ಲುಗಳ ಆರೈಕೆ ಅಗತ್ಯ

Dentel shibira
Published on

ಉಪ್ಪಿನಬೆಟಗೇರಿ: ಮನುಷ್ಯನ ಸದೃಢ ಶರೀರ ಹಾಗೂ ಆರೋಗ್ಯಕ್ಕೆ ಹಲ್ಲುಗಳು ಮುಖ್ಯವಾಗಿದ್ದು, ಅವುಗಳ ಆರೈಕೆ ಅಗತ್ಯವಾಗಿದೆ ಎಂದು ಎಸ್​ಡಿಎಂ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಂ. ಶೋಧನ ಹೇಳಿದರು.

ಸಮೀಪದ ಅಮ್ಮಿನಬಾವಿ ವಾಲ್ಮೀಕಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಸ್​ಡಿಎಂ ದಂತ ಮಹಾವಿದ್ಯಾಲಯ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಚಿತ ದಂತ ಪರೀಕ್ಷಾ ಶಿಬಿರದಲ್ಲಿ ಅವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಬಸವರಾಜ ತಿದಿ ಅಧ್ಯಕ್ಷತೆ ವಹಿಸಿದ್ದರು. ವಾಲ್ಮೀಕಿ ಸಮಾಜದ ಮುರುಗೇಶ ಗಾಡದ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ಅಶೋಕ ಕೆ., ಒಕ್ಕೂಟದ ಅಧ್ಯಕ್ಷೆ ಸಾಹಿನ ಬಾನಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ಸಿ., ವಲಯ ಮೇಲ್ವಿಚಾರಕಿ ಸಂಗೀತಾ ಎಂ. ಸೇರಿ ಸೇವಾ ಪ್ರತಿನಿಧಿಗಳು ಗ್ರಾಮಸ್ಥರಿದ್ದರು. ಸುತ್ತಲಿನ ಗ್ರಾಮಗಳ 280ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net