ದಂತ ತಪಾಸಣೆಯಲ್ಲಿ ದಾಖಲೆ

IMG_20250910_201826_669-1.jpg
Published on

ಹುಬ್ಬಳ್ಳಿ: ಯಡಿಯೂರು ಸಿದ್ದಲಿಂಗೇಶ್ವರ ಚಾರಿಟಬಲ್ ಟ್ರಸ್ಟ್ ಮತ್ತು ಕೆಡಿಸಿ ಡೆಂಟಲ್ ಗ್ರುಪ್ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ಶಿಬಿರ ಏರ್ಪಡಿಸಿ ದಾಖಲೆ ನಿರ್ಮಿಸಲಾಗಿದೆ.

ಮಂಗಳವಾರ ರಾಜ್ಯದೆಲ್ಲೆಡೆ ಸುಮಾರು 56 ಸಾವಿರ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ನಡೆಸಲಾಯಿತು.

ಹುಬ್ಬಳ್ಳಿ, ಬೆಂಗಳೂರು, ರಾಮನಗರ, ಮುಧೋಳ ಮುಂತಾದ ಕಡೆಗಳಲ್ಲಿ ಶಿಬಿರಗಳು ನಡೆದವು. ನಗರದ ಗಂಗಾಧರ ಹೈಸ್ಕೂಲ್, ಚಿನ್ಮಯ್ ಸ್ಕೂಲ್ ನಲ್ಲಿ ಶಿಬಿರ ಆಯೋಜಿಸಲಾಯಿತು.

ಉಚಿತ ಶಿಬಿರವನ್ನು ಆಸ್ಕರ್ ಬುಕ್ ರೆಕಾರ್ಡ್ಸ್ ನವರು ದಾಖಲಿಸಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಡಾ. ನಿರಂಜನ ಪರಮಶೆಟ್ಟಿ, ಡಾ. ಭಾಗ್ಯಲಕ್ಷ್ಮೀ ಫೌಜದಾರ್, ಡಾ. ವಿನಯ ಗುಗ್ಗರಿ, ಡಾ. ಸ್ಟೇಫನ್ ಪಾವೆಲ್, ಡಾ. ಶ್ವೇತಾ, ಡಾ. ಪಾರ್ಥಿಬನ್, ಡಾ. ಪ್ರಶಾಂತ, ಡಾ. ಲಕ್ಷ್ಮೀ ಸೇರಿ 150 ವೈದ್ಯರು ಶಿಬಿರದಲ್ಲಿ ತಪಾಸಣೆ ಕೈಗೊಂಡರು. ಮಹೇಶ ಮಗದುಮ್, ಸಂಜೀವಕುಮಾರ, ಸುರೇಶ, ಇತರರು ನೆರವು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net