ಹಲ್ಲು ಆರೋಗ್ಯವಾಗಿದ್ದರೆ ಮುಖ ಆಕರ್ಷಕ : ಗುರುರಾಜ್ ಎಸ್.ಪೂಜಾರಿ ಪ್ರತಿಪಾದನೆ

New Project (32)
Published on

ಮೂಲ್ಕಿ: ಹಲ್ಲುಗಳು ಆರೋಗ್ಯವಾಗಿದ್ದರೆ ಮಾತ್ರ ಮುಖದ ಆಕರ್ಷಣೆಯ ಜತೆಗೆ ಆರೋಗ್ಯವೂ ಲಭ್ಯ. ತಂಬಾಕು ಮುಂತಾದ ದುಶ್ಚಟಗಳಿಂದ ದೂರವಿದ್ದು ಹಲ್ಲಿನ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗುರುರಾಜ್ ಎಸ್.ಪೂಜಾರಿ ಹೇಳಿದರು.

ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ 10ನೇ ತೋಕೂರು ಪ್ರಾಯೋಜಕತ್ವದಲ್ಲಿ, ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ ಭಾರತ್ ದಕ್ಷಿಣ ಕನ್ನಡ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ, ರೋಟರಿ ಕ್ಲಬ್ ಬೈಕಂಪಾಡಿ, ಪೂಜಾ ಎರೇಂಜರ್ಸ್ ಮತ್ತು ಕೇಟರರ್ಸ್, ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಎಸ್.ಎಸ್.ಮ್ಯೂಸಿಕ್ ತೋಕೂರು, ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಆಶ್ರಯದಲ್ಲಿ ವಿಶ್ವ ತಂಬಾಕುರಹಿತ ದಿನ ಪ್ರಯುಕ್ತ ಭಾನುವಾರ ದಂತ ವೈದ್ಯಕೀಯ ಉಚಿತ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ನವೀನ್ ಸಾಲ್ಯಾನ್ ಉದ್ಘಾಟಿಸಿದರು. ದಂತ ಮಹಾವಿದ್ಯಾಲಯದ ಡಾ.ಶಿಲ್ಪಾ ಎಂ.ರಾವ್, ಪ್ರಿಯದರ್ಶಿನಿ ಕ್ರೆಡಿಟ್ ಕೋಆಪರೇಟಿವ್‌ನ ಅಕ್ಷತಾ ಶೆಟ್ಟಿ, ಪೂಜಾ ಫ್ರೆಂಡ್ಸ್ ಉಪಾಧ್ಯಕ್ಷ ಆಕಾಶ್ ಮೆಂಡನ್, ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಸಂಪತ್ ಜೆ.ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್ ಉಪಸ್ಥಿತರಿದ್ದರು.

ಪಡುಪಣಂಬೂರು ಗ್ರಾಪಂ ಉಪಾಧ್ಯಕ್ಷ ಹೇಮನಾಥ ಅಮೀನ್, ಯಕ್ಷ ದೇಗುಲ ಹತ್ತು ಸಮಸ್ತರು ಅಧ್ಯಕ್ಷ ದಿನಕರ್ ಸಾಲ್ಯಾನ್, ವಿಶ್ವ ಬ್ಯಾಂಕ್ ಕುಡಿಯುವ ನೀರು ಮತ್ತು ಪರಿಸರ ನೈರ್ಮಲ್ಯ ಸಮಿತಿಯ ಅಧ್ಯಕ್ಷ ಗಣೇಶ್ ಜಿ.ಬಂಗೇರ, ಎಸ್.ಎಸ್.ಮ್ಯೂಸಿಕ್ ಮುಖ್ಯಸ್ಥ ಹರಿಪ್ರಸಾದ್, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳಾದ ಸುರೇಶ್, ಸಂತೋಷ್ ದೇವಾಡಿಗ, ಶ್ರೀ ಓಂಕಾರೇಶ್ವರಿ ಮಂದಿರ ಅಧ್ಯಕ್ಷ ಸದಾಶಿವ ಕುಂದರ್, ಸಮಾಜಸೇವಕ ಧರ್ಮಾನಂದ ಶೆಟ್ಟಿಗಾರ್ ತೋಕೂರು, ಸಂಜೀವ ಕರ್ಕೇರ, ಹಿಮಕರ್ ಕೋಟ್ಯಾನ್, ಸುರೇಶ್ ಬಿ.ದೇವಾಡಿಗ ಶುಭ ಹಾರೈಸಿದರು.

ತಂಬಾಕು ದುಷ್ಪರಿಣಾಮದ ಬಗ್ಗೆ ಬೀದಿ ನಾಟಕ ಪ್ರದರ್ಶಿಸಲಾಯಿತು. 48 ಫಲಾನುಭವಿಗಳು ಪ್ರಯೋಜನ ಪಡೆದರು. ಮೋಹನ್ ದಾಸ್ ದೇವಾಡಿಗ ಸ್ವಾಗತಿಸಿದರು. ಮಹಮ್ಮದ್ ಶರೀಫ್ ವಂದಿಸಿದರು. ಭಾಸ್ಕರ್ ಅಮೀನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net