ಡೆನ್ನಾನ ಡೆನ್ನನ ಆಮಂತ್ರಣ ಬಿಡುಗಡೆ

dennana
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯದಲ್ಲಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಸಹಯೋಗದೊಂದಿಗೆ ಡಿ.1ರಂದು ನಡೆಯಲಿರುವ ಡೆನ್ನಾನ ಡೆನ್ನನ 2024 ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗುರಿಪಳ್ಳದಲ್ಲಿ ಬಿಡುಗಡೆಗೊಳಿಸಲಾಯಿತು.

ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಗುರಿಪಳ್ಳದ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷರಾದ ಜಯ ವಿಕ್ರಮ ಕಲ್ಲಾಪು ಮಾತನಾಡಿ, ಬಿಲ್ಲವ ಸಂಘಟನೆ ಗ್ರಾಮ ಮಟ್ಟದಲ್ಲೂ ಸದೃಢವಾಗಬೇಕು ಎಂದರು.

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸದಾಶಿವ ಊರ, ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಅಧ್ಯಕ್ಷರಾದ ಎಂ.ಕೆ.ಪ್ರಸಾದ್, ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಕಾರ್ಯದರ್ಶಿ ನಿತೀಶ್ ಎಚ್.ಮಾತನಾಡಿದರು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯ ನಿರ್ದೇಶಕರಾದ ಜಯ ಕುಮಾರ್ ನಡ, ಚಂದ್ರಶೇಖರ ಇಂದಬೆಟ್ಟು, ಮಹಿಳಾ ಬಿಲ್ಲವ ವೇದಿಕೆ ಗುರಿಪಳ್ಳದ ಕಾರ್ಯದರ್ಶಿ ದೇವಕಿ ಉಪಸ್ಥಿತರಿದ್ದರು.

ಬ್ರಹ್ಮಶ್ರೀ ಸ್ವ ಸಹಾಯ ಸಂಘ ಕೊಡೆಕ್ಕಲ್ ಹಾಗೂ ಗುರಿಪಳ್ಳದ ಸದಸ್ಯರು, ಕನ್ಯಾಡಿ ಹಾಗೂ ಉಜಿರೆ ಗ್ರಾಮದ ಎಲ್ಲ ಸಮಾಜ ಬಾಂಧವರು ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಯುವವಾಹಿನಿ ಸಂಚಾಲನ ಸಮಿತಿ ಗುರಿಪಳ್ಳ ಅಧ್ಯಕ್ಷ ಜಯರಾಮ್ ಪೂಜಾರಿ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net