

ವಿಜಯಪುರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ ಮೇಲೆ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಡಾ.ದೇವಾನಂದ ಚವಾಣ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಗರದ ನೂತನ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಕೆಲ ಕಾಲ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಬಳಿಕ ತಹಸೀಲ್ದಾರ್ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಡಾ.ದೇವಾನಂದ ಚವಾಣ್ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಈ ರಾಜ್ಯಕಂಡ ಅಪರೂಪದ ರಾಜಕಾರಣಿ. ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಮುತ್ಸದ್ದಿ ನಾಯಕರು. ಈ ದೇಶದ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರ ಕುಟುಂಬದಿಂದ ಬಂದ ಕುಮಾರಸ್ವಾಮಿ ಅವರ ಬಗ್ಗೆ ಎಡಿಜಿಪಿ ಚಂದ್ರಶೇಖರ ಅವಹೇಳನಕಾರಿ ಪದ ಬಳಕೆ ಮಾಡಿರುವುದು ಖಂಡನೀಯ ಎಂದರು.
ವಿಜಯಪುರ ತಾಲೂಕಾಧ್ಯಕ್ಷ ನಿಂಗನಗೌಡ ಎಸ್. ಸೋಲಾಪೂರ ಮಾತನಾಡಿ, ಅಧಿಕಾರಿ ಚಂದ್ರಶೇಖರ ಅವರ ಹೇಳಿಕೆಯಿಂದ ಕರ್ನಾಟಕದ ಕೋಟ್ಯಂತರ ಜನರ ಮನಸ್ಸಿಗೆ ನೋವಾಗಿದೆ. ಎಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿಗಳ ಮನಸ್ಸಿಗೆ ನೋವಾಗಿದೆ.ಎರಡು ಬಾರಿ ಮುಖ್ಯಮಂತ್ರಿಯಾದವರು, ಕೇಂದ್ರ ಸಚಿವರ ಬಗ್ಗೆ ಅವಹೇಳನಕಾರಿ ಪದ ಬಳಸಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಮುಖಂಡ ಎಸ್.ವಿ. ಪಾಟೀಲ, ನಾನಾಗೌಡ ಕಳಸಗೊಂಡ, ಕಾಮನಗೌಡ ಪಾಟೀಲ, ಶಿವು ಬಂಡಿ, ರವಿ ಚವಾಣ್, ಸುಜಾತಾ ಕಣಬೂರ, ಕಲ್ಲು ಬಳ್ಳಾರಿ, ಆಶಾರಾಣಿ ಹಿರೇಕುರಬರ, ಇಂದ್ರಾಬಾಯಿ ಹಜೇರಿ, ಪ್ರಕಾಶ ರಜಪೂತ, ಶಿವು ಹಿರೇಕುರಬರ, ಸಂಗಮೇಶ ಹಡಪದ, ಭೀಮರಾಯ ಇಬ್ರಾಹಿಂಪೂರ, ರಾಮು ತೊನಶ್ಯಾಳ, ದಿಲೀಪ ರಾಠೋಡ, ಮಲ್ಲು ತೊರವಿ, ಸುಭಾಸ ನಾಯಕ, ಸಂಜು ದೊಡಮನಿ, ಪೀರಬಾಶಾ ಗಚ್ಚಿನಮಹಲ, ಪುಂಡಲೀಕ ವಾಲಿಕಾರ, ಸೈಯ್ಯದಸಿಕಂದರ ಶಿರನಾಳ, ಬಸಲಿಂಗಪ್ಪ ಸಾರವಾಡ ಮತ್ತಿತರರಿದ್ದರು.