ಪೊಲೀಸರಿಂದ ಜಾಮೀನಿಗೆ ತಕರಾರರು

court
Published on

ಹುಬ್ಬಳ್ಳಿ: 13 ಕ್ರಿಮಿನಲ್ ಹಾಗೂ 3 ಮುಂಜಾಗ್ರತಾ ಪ್ರಕರಣ ಎದುರಿಸುತ್ತಿರುವ ಶ್ರೀಕಾಂತ ಪೂಜಾರ ಅವರನ್ನು ಜಾಮೀನು ಮೇಲೆ ಬಿಡಬಾರದು ಎಂದು ಪೊಲೀಸರು, ಕೋರ್ಟ್‌ಗೆ ತಕರಾರು ಸಲ್ಲಿಸಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕಾಂತೇಶ ಅಲಿಯಾಸ್ ಶ್ರೀಕಾಂತ ಅಲಿಯಾಸ್ ಕಾಂತ್ಯಾ ಪೂಜಾರ ಮೇಲೆ ಶಹರ ಠಾಣೆಯಲ್ಲಿ ಅಪರಾಧ ಸಂಖ್ಯೆ 252/1992ರ ಕಲಂ 143, 147, 436, 427, 149 ಪ್ರಕರಣವು 1992 ಡಿಸೆಂಬರ್ 24ರಂದು ದಾಖಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 13 ಜನ ಆರೋಪಿಗಳಿದ್ದು, ಇದರಲ್ಲಿ ಶ್ರೀಕಾಂತ ಮೂರನೇಯವರು. ಈತನನ್ನು ಡಿ. 29ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿ ಶ್ರೀಕಾಂತ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಜಾಮೀನಿನ ಮೇಲೆ ಬಿಟ್ಟರೆ ಮುಂದೆ ಇದೇ ರೀತಿ ನ್ಯಾಯಾಲಯಕ್ಕೆ ಗೈರು ಹಾಜರಾಗುವ ಸಂಭವವಿದೆ. ಈತನ ಮೇಲೆ ಹುಬ್ಬಳ್ಳಿ ನಗರದ ವಿವಿಧ ಠಾಣೆಗಳಲ್ಲಿ 13 ಕ್ರಿಮಿನಲ್, 3 ಮುಂಜಾಗ್ರತಾ ಪ್ರಕರಣಗಳಿವೆ. ಶ್ರೀಕಾಂತ ಸರಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ಜಾಮೀನಿನ ಮೇಲೆ ಬಿಡಬಾರದು ಎಂದು ಅಭಿಯೋಜನೆ ಪರವಾಗಿ ಪೊಲೀಸರು ನ್ಯಾಯಾಲಯಕ್ಕೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net