ರಾಜ್ಯ ಸರ್ಕಾರದ ಪ್ರಮಾದದಿಂದ ಮೆಡಿಕಲ್ ಕಾಲೇಜಿಗೆ ಅನುಮತಿ ನಿರಾಕರಣೆ

Dr C.N. Manjunath
Published on

ಮಾಗಡಿ: ರಾಮನಗರ ಹಾಗೂ ಕನಕಪುರ ಮೆಡಿಕಲ್ ಕಾಲೇಜಿಗೆ ಕೇಂದ್ರದಿಂದ ಅನುಮತಿ ನಿರಾಕರಣೆಗೆ ಅಪ್ಲಿಕೇಷನ್ ತಪ್ಪಾಗಿ ಹಾಕಿರುವುದೇ ಪ್ರಮುಖ ಕಾರಣ ಎಂದು ಸಂಸದ ಡಾ.ಸಿ.ಎನ್ .ಮಂಜುನಾಥ್ ತಿಳಿಸಿದರು.

ಮೆಡಿಕಲ್ ಕಾಲೇಜಿಗೆ ಅನುಮತಿ ನೀಡುವುದಕ್ಕೆ 600 ಬೆಡ್ ಆಸ್ಪತ್ರೆ ಬೇಕಿತ್ತು. ಅದನ್ನು ಕಟ್ಟಿಸಿಲ್ಲ. ಬೋಧಕರನ್ನು ನೇಮಿಸಿಲ್ಲ. ಮೂಲ ಸೌಕರ್ಯ ಯಾವುದೂ ಇಲ್ಲ. ಸರಿಯಾಗಿ ಅಪ್ಲಿಕೇಷನ್ ಹಾಕದೆ ನಾವು ಲೋಕಸಭೆಯಲ್ಲಿ ಮಾತನಾಡಲು ಆಗಲ್ಲ. ಮಾತನಾಡಿದರೆ ವೈದ್ಯರಾಗಿ ೂಲಿಷ್ ಆಗಿ ಮಾತಾಡ್ತಾರೆ ಅಂತಾರೆ. ಇದು ರಾಜ್ಯ ಸರ್ಕಾರದ ಪ್ರಮಾದ ಎಂದು ಆರೋಪಿಸಿದರು.

ರಾಮನಗರ ಜಿಲ್ಲೆ ಮರು ನಾಮಕರಣಕ್ಕೆ ಹಾಸನದವರು ಮಾತ್ರ ವಿರೋಧ ಎಂಬ ಶಾಸಕ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು 40 ವರ್ಷದಿಂದ ಬೆಂಗಳೂರಲ್ಲೇ ಇದ್ದೀವಿ. ಈ ಹೇಳಿಕೆ ಕೊಟ್ಟವರೇ ಬೆಂಗಳೂರಿನಲ್ಲಿ ಇರಲಿಲ್ಲ ಎಂದ ಅವರು, ಒಂದು ಸರಿಯಾದ ಮೆಡಿಕಲ್ ಕಾಲೇಜು ಮಾಡಲು ಆಗಿಲ್ಲ. ವೈದ್ಯರ ನೇಮಕ ಮಾಡಲು ಆಗಿಲ್ಲ. ಮೊದಲು ಅದನ್ನು ಮಾಡಲಿ ಎಂದು ಶಾಸಕರಿಗೆ ಡಾ. ಮಂಜುನಾಥ್ ಟಾಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net