ಬಿಬಿಎಂಪಿಯಿಂದ 'ಡೆಂಘೆ ವಾರಿಯರ್' ಸ್ಪರ್ಧೆ

Vijayavani-Featured-Image
Published on

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಡೆಂಘೆ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಲಿಕೆಯ ಆರೋಗ್ಯ ವಿಭಾಗವು ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಡೆಂಘೆ ವಾರಿಯರ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದೆ.

ಡೆಂಘೆ ವಿರುದ್ಧ ಹೋರಾಡಲು ಪಾಲಿಕೆ ಆರೋಗ್ಯ ವಿಭಾಗದ ಜತೆ ನಾಗರಿಕರು ಹಾಗೂ ವಿದ್ಯಾರ್ಥಿಗಳು ಕೈ ಜೋಡಿಸುವ ನಿಟ್ಟಿನಲ್ಲಿ ಈ ವಿನೂತನ ಕ್ರಮವನ್ನು ಕೈಗೊಳ್ಳಲಾಗಿದೆ. ಆಯಾ ವಲಯ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು, ಎಎನ್‌ಎಂಗಳು ಮನೆ-ಮನೆಗಳಿಗೆ ಭೇಟಿ ನೀಡಿ ನಾಗರಿಕರಲ್ಲಿ ಡೆಂಘೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುತ್ತಾರೆ. ಇನ್ನು, ಆರೋಗ್ಯ ವೈದ್ಯಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಡೆಂಘೆ ನಿಯಂತ್ರಣದ ಕುರಿತು ವಿಧ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಪಾಲಿಕೆಯು ಡೆಂಘೆ ನಿಯಂತ್ರಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಡೆಂಘೆ ನಿಯಂತ್ರಣಕ್ಕಾಗಿ ನಾಗರಿಕರು ಅಥವಾ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ, ಯಾವ ರೀತಿ ಇತರರಿಗೆ ಅರಿವು ಮೂಡಿಸಲಾಗಿದೆ ಎಂಬುದರ ಕುರಿತು ಕಿರು ಚಿತ್ರ ಮಾಡಿ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರ ಸಾಮಾಜಿಕ ಜಾಲತಾಣಕ್ಕೆ ಟ್ಯಾಗ್ ಮಾಡಬೇಕು.

ಜು.25ರೊಳಗೆ ವೀಡಿಯೋ ಅಪ್‌ಲೋಡ್‌ಗೆ ಅವಕಾಶ:

ಡೆಂಘೆ ನಿಯಂತ್ರಿಸುವ ಕುರಿತು ಅತ್ಯುತ್ತಮ ವಿಡಿಯೋ ಮಾಡಿದ 5 ವಿದ್ಯಾರ್ಥಿಗಳಿಗೆ ಡೆಂಘೆ ವಾರಿಯರ್ ಎಂಬ ಸಂಖ್ಯೆಗಳನ್ನು ನೀಡಲಾಗುತ್ತದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಜು.25 ರವರೆಗೆ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಪ್‌ಲೋಡ್ ಮಾಡಿದ ವೀಡಿಯೋಗಳಲ್ಲಿ ಹೆಚ್ಚು ಲೈಕ್ಸ್ ಬಂದಿರುವ 5 ವೀಡಿಯೋ ಹಾಗೂ ಯಾವ ಶಾಲೆಗಳಲ್ಲಿ ಹೆಚ್ಚು ಡೆಂಘೆ ವಾರಿಯರ್ಸ್ ಆಗುತ್ತಾರೆ ಅಂತಹ ಶಾಲೆಗಳನ್ನು ಆಯ್ಕೆ ಮಾಡಿ ಪಶಸ್ತಿ ನೀಡಲಾಗುವುದು ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net