ನಿಯಂತ್ರಣಕ್ಕೆ ಬಾರದ ಡೆಂಘೆ 381 ಹೊಸ ಪ್ರಕರಣಗಳು ಪತ್ತೆ

Dengue -
Published on

ಬೆಂಗಳೂರು: ರಾಜ್ಯದಲ್ಲಿ ಗುರುವಾರ ಒಂದೇ 381 ಹೊಸ ಡೆಂಘೆ ಪ್ರಕರಣಗಳು ವರದಿಯಾಗಿರುವುಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಎಷ್ಟೆಲ್ಲ ಜನಜಾಗೃತಿ, ಮುಂಜಾಗ್ರತಾ ಕ್ರಮಗಳ ಹೊರತಾಗಿ ಡೆಂಘೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದಾಗಿ ಪ್ರಕರಣಗಳ ಸಂಖ್ಯೆ 8 ಸಾವಿರ ಗಡಿ ದಾಡಿದೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 2,503 ಶಂಕಿತ ಡೆಂಘೆ ಪರೀಕ್ಷೆಗಳನ್ನು ನಡೆಸಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 171, ಮೈಸೂರು 44, ಹಾಸನ 38, ಚಿತ್ರದುರ್ಗ 20, ಮಂಡ್ಯ 18, ತುಮಕೂರು 17, ದಾವಣಗೆರೆ 16, ಚಿಕ್ಕಮಗಳೂರು 12, ವಿಜಯಪುರ 10 ಸೇರಿ ರಾಜ್ಯಾದ್ಯಂತ 293 ಪ್ರಕರಣಗಳು ವರದಿಯಾಗಿದೆ.

ಈ ಪ್ರಕರಣಗಳಲ್ಲಿ ಒಂದು ವರ್ಷದೊಳಗಿನ ನಾಲ್ಕು ಮಕ್ಕಳು ಹಾಗೂ 1ರಿಂದ 18 ವರ್ಷದೊಳಗಿನ 140 ಮಂದಿ ಮತ್ತು 18 ವರ್ಷಗಳು ಮೇಲ್ಪಟ್ಟ 237 ಮಂದಿ ಡೆಂಘೆ ಪೀಡಿತರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ವರದಿಯಾದ ಒಟ್ಟು ಡೆಂಘೆ ಪ್ರಕರಣಗಳ ಸಂಖ್ಯೆ 8,221ಕ್ಕೆ ಏರಿಕೆಯಾಗಿದೆ. ಏಳು ಮಂದಿ ಮೃಪಟ್ಟಿದ್ದಾರೆ. ಡೆಂಘೆ ಸೋಂಕಿತರಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 362 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net