ಡೆಂಘೆ ತಡೆ ಜಾಗೃತಿ ಕಾರ್ಯಕ್ರಮ

10 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಎನ್​ಎಸ್​ಎಸ್​ ಘಟಕ ವತಿಯಿಂದ ಕಾಲೇಜು ಆವರಣದಲ್ಲಿ ಉದ್ಯಾನ ವಿಭಾಗದ ಸಿಬ್ಬಂದಿಗಳಿಗೆ ಡೆಂಘೆ ಜ್ವರ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಎಸ್​ಡಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ್​ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕೀಟಶಾಸ್ತ್ರಜ್ಞ ಮಂಜುನಾಥ ಸಂಪನ್ಮೂಲ ವ್ಯಕ್ತಿಯಾಗಿದ್ದರು. ವಿಶ್ವ ವಿದ್ಯಾಲಯದ ಎನ್​ಎಸ್​ಎಸ್​ ಸಂಯೋಜಕ ಡಾ. ಉಮೇಶ ದೀಕ್ಷಿತ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ಗುರುತಿಸಿ ಮತ್ತು ಅವುಗಳ ನಿಯಂತ್ರಣ ಮಾಡುವ ಪ್ರಾಮುಖ್ಯತೆ, ಸೊಳ್ಳೆ ಕಡಿತದಿಂದ ರಕ್ಷಿಸಲು ವೈಯಕ್ತಿಕ ರಕ್ಷಣಾ ಕ್ರಮಗಳ ಬಳಕೆ ಕುರಿತು ಮಾಹಿತಿ ನೀಡಲಾಯಿತು. ಲಾವಿರ್ವೋರಸ್​ ಮೀನುಗಳ (ಗಪ್ಪಿ ಮೀನು) ಜತೆಗೆ ಸೊಳ್ಳೆಗಳ ಲಾರ್ವಾ ಮತ್ತು ಪ್ಯೂಪಲ್​ ಹಂತಗಳ ನೇರ ಪ್ರದರ್ಶನ ಮಾಡಲಾಯಿತು.
ಎನ್​ಎಸ್​ಎಸ್​ ಕಾರ್ಯಕ್ರಮ ಅಧಿಕಾರಿ ಡಾ. ರಾಕೇಶ ನಾಯಕ್​ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net