

ವಿಜಯವಾಣಿ ಸುದ್ದಿಜಾಲ ಗದಗ
ಡೆಂಘಿ ಜ್ವರವು ವೈರಸ್ದಿಂದ ಉಂಟಾಗುವ, ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಮಕ್ಕಳು ಸೊಳ್ಳೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ನಗರದ ಸರ್ಕಾರಿ ಶಾಲೆ ನಂ. 15ರಲ್ಲಿ ಡೆಂಘಿ ಜ್ವರ ಕುರಿತು ವಿದ್ಯಾಥಿರ್ಗಳಿಗಾಗಿ ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಈಡೀಸ್ ಎಂಬ ಹೆಣ್ಣು ಸೊಳ್ಳೆಯಿಂದ ಡೆಂಘಿ ಹರಡುತ್ತಿದೆ. ಸೊಳ್ಳೆಗಳ ಕಡಿತದಿಂದ ನಮ್ಮನ್ನು ನಾವು ರಸಿಕೊಳ್ಳಬೇಕು. ನಿಂತ ನೀರಿನ ಎಲ್ಲ ಮೂಲಗಳನ್ನು ಸ್ವಚ್ಚಗೊಳಿಸಬೇಕು. ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು ಎಂದರು.
ಶಿಕಿ ಪಿ.ಎಸ್. ಬ್ಯಾಳಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಡೆಂಘಿ ಜ್ವರವು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ನಿಂತ ನೀರಿನಲ್ಲಿ ಆಟ ಆಡುವುದನ್ನು ಬಿಡಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯನಿ ವಿ. ಎಸ್. ಬಸಾಪೂರ, ಬಿ. ಯಶೋಧಾ, ವಿ. ಬಿ. ಕರಬಸಗೌಡ್ರ, ಶೋಭಾ ವಗ್ಗಿ ಇತರರು ಇದ್ದರು.