

ವಿಜಯವಾಣಿ ಸುದ್ದಿಜಾಲ ಗದಗ
ರಾಷ್ಟ್ರೀಯ ಡೆಂಗೀ ದಿನ ನಿಮಿತ್ಯ ಜಿಲ್ಲಾಡಳಿತ ವತಿಯಿಂದ ಬುಧಬವಾರ ನಗರದಲ್ಲಿ ಮಾನವ ಸರಪಳಿ ಪ್ರದಶಿರ್ಸಿ ಜನಜಾಗೃತಿ ಮೂಡಿಸಲಾಯಿತು.
ಜಿಪಂ ಯೋಜನಾ ನಿರ್ದೇಶಕ ಜಗದೇವ ಬಿ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ಎಸ್.ಎಸ್.ನೀಲಗುಂದ ಜಿಲ್ಲಾ ಮಟ್ಟದ ಮಾನವ ಸರಪಳಿ ಪ್ರದರ್ಶನ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಗದೇವ ಬಿ ಮಾತನಾಡಿ ಪರಿಸರ ಸ್ವಚ್ಛತೆ ಹಾಗೂ ನೀರಿನ ಸರಿಯಾದ ನಿರ್ವಹಣೆ ಮೂಲಕ ಹಾಗೂ ಸ್ವಯಂ ರಣಾ ವಿಧಾನಗಳನ್ನು ಅಳವಡಿಸಿಕೊಂಡು ಮೂಲಕ ಡೆಂಗಿ ಜ್ವರವನ್ನು ಹರಡದಂತೆ ತಡೆಯಬಹುದು. ಡೆಂಗಿ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅವಶ್ಯ ಎಂದು ಹೇಳಿದರು.
ಡಾ. ಪ್ರಿತ್ ಖೋನಾ, ಅನ್ನಪೂರ್ಣ ಶೆಟ್ಟರ, ಗೀತಾ ಕಾಂಬ್ಳೆ, ಬಿ. ಎಂ ಹುಲ್ಯಾಳ, ಈರಣ್ಣ ಚಲ್ಕಿ. ಎಸ್. ಎನ್. ಲಿಂಗದಾಳ, ಅಜಯಕುಮಾರ ಕಲಾಲ, ಪ್ರಭು ಹೊನ್ನಗುಡಿ, ಬಿ. ಸಿ. ಹೀರೆಹಾಳ, ಏಕನಾಥ ಪಾಟೀಲ, ಎಸ್. ಬಿ. ಗಡಾದ ಇದ್ದರು.