ಮುಂಜಾಗ್ರತಾ ಕ್ರಮದಿಂದ ಡೆಂಘೆ ನಿಯಂತ್ರಣ ಸಫಲ: ಸುರಳ್ಕರ್ ವಿಕಾಸ್ ಕಿಶೋರ್

denge warriors
Published on

ಬೆಂಗಳೂರು: ನಗರದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡ ಪರಿಣಾಮ ಡೆಂಘೆ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ವಿವಿಧ ವಿಭಾಗಗಳ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದರು ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೆ ಪ್ರಕರಣಗಳನ್ನು ನಿಯಂತ್ರಿಸಲು ಪಾಲಿಕೆಯ ಆರೋಗ್ಯ ವಿಭಾಗವು ಕಳೆದ ಜುಲೈ ತಿಂಗಲಿನಲ್ಲಿ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಡೆಂಘೆ ವಾರಿಯರ್’ ಸ್ಪರ್ಧೆ ವಿಜೇತರಿಗೆ ಪುರಭವನದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಸಾಂಕ್ರಾಮಿಕ ರೋಗಗಳು ಬಂದಾಗ ಸಮುದಾಯವು ಆಡಳಿತದೊಂದಿಗೆ ಕೈಜೋಡಿಸಿದರೆ ತ್ವರಿತಗತಿಯಲ್ಲಿ ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಸಾಮಾಜಿಕ ಜಾಲತಣ ಬಳಸಿಕೊಂಡು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದಾಗ ಹೆಚ್ಚು ಮಂದಿಗೆ ವಿಷಯ ತಲುಪಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.

ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ವಾರಿಯರ್ಸ್ ಭಾಗವಹಿಸಿ ಡೆಂಘೆ ಮೂಲ ಗುರುತಿಸುವಿಕೆ, ವರದಿ ಮಾಡುವಿಕೆ ಮತ್ತು ತಡೆಗಟ್ಟುವ ಕುರಿತು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಣದಲ್ಲಿ ಅಪ್‌ಲೋಡ್ ಮಾಡಿದ್ದರು. ಡೆಂಘೆ ವಾರಿಯರ್ಸ್ ಸಿದ್ದಪಡಿಸಿದ ವಿಡಿಯೋಗಳು 58 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ವಿವಿಧ ಸಂಸ್ಥೆಗಳಿಂದ ಪ್ರಾಯೋಜಕತ್ವ ಪಡೆದು ವಿಜೇತರಿಗೆ ಪ್ರಶಸ್ತಿ ಪುರಸ್ಕಾರ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಸೈಯದ್ ಸಿರಾಜುದ್ದೀನ್ ಮದನಿ, ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಸೇರಿ ಇನ್ನಿತರರು ಹಾಜರಿದ್ದರು.

ಪ್ರಶಸ್ತಿ ವಿಜೇತರ ವಿವರ:

ಡೆಂಘೆ ಕುರಿತು ಮಾಡಿರುವ ರೀಲ್ಸ್​​​​ಗಳಲ್ಲಿ ಹೆಚ್ಚು ಲೈಕ್ಸ್ ಹಾಗೂ ವೀಕ್ಷಣೆ ಮಾಡಿರುವ ವಿಡಿಯೋಗಳ ಅನುಸಾರ ಪ್ರಶಸ್ತಿ ವಿತರಣೆ ಮಾಡಲಾಗುತ್ತಿದೆ. ಆಯ್ಕೆಯಾಗಿರುವ 10 ಮಂದಿ ಪೈಕಿ ಮೊದಲ 5 ವಿಜೇತರಿಗೆ ಮೊದಲ ಪ್ರಶಸ್ತಿ ಹಾಗೂ ನಂತರದ ಐವರಿಗೆ ದ್ವಿತೀಯ ಬಹುಮಾನ ನೀಡಲಾಗಿದೆ. ಅದಲ್ಲದೆ ಹೆಚ್ಚು ಮಕ್ಕಳಿಗೆ ಪ್ರೇರಣೆ ನೀಡಿದ ಶಿಕ್ಷಕಿ ಹಾಗೂ ಉತ್ತಮ ಶಿಕ್ಷಣ ಸಂಸ್ಥೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net