

ಕಲಘಟಗಿ: ಆರೋಗ್ಯ ಇಲಾಖೆ, ತಾಲೂಕಾಡಳಿತ, ಗ್ರಾಪಂ ಹಾಗೂ ಶಾಲೆ-ಕಾಲೇಜುಗಳ ಆಶ್ರಯದಲ್ಲಿ ತಾಲೂಕಿನ ವಿವಿಧ ಸರ್ಕಾರಿ-ಖಾಸಗಿ ಶಾಲೆ-ಕಾಲೇಜುಗಳಲ್ಲಿ ಡೆಂಘೆ ನಿಯಂತ್ರಿಸುವ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳು ಜರುಗಿದವು.
ಸರ್ಕಾರಿ ಪದವಿ ಕಾಲೇಜು: ಪಟ್ಟಣದ ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ‘ಡೆಂಘೆ ಜ್ವರ ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಪಂ ಧಾರವಾಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ ಹಾಗೂ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಜರುಗಿತು. ಆರೋಗ್ಯ ಇಲಾಖೆ ಎಸ್ಎಚ್ಐಒ ಸಿ.ಎಸ್. ಗಾವರವಾಡ, ಸಿಎಚ್ಒ ವಿಶ್ವನಾಥ ಪೂಜಾರ ಅವರು ಡೆಂಘೆ ಸಾಂಕ್ರಾಮಿಕ ಕಾಯಿಲೆ ಹರಡುವ ಸೊಳ್ಳೆಯ ಜೀವನಕ್ರಮ ಹಾಗೂ ಅದನ್ನು ನಿಯಂತ್ರಿಸುವ ವಿಧಾನಗಳ ಕುರಿತು ವಿವರಿಸಿದರು. ಪ್ರಾಂಶುಪಾಲ ಪೊ.ಬಿ.ಪಿ. ಮಠದ ಅಧ್ಯಕ್ಷತೆ ವಹಿಸಿದ್ದರು. ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಪೊ.ಎಂ.ಬಿ. ಕುರಿ, ಪೊ. ಎಸ್.ಡಿ. ಡಾಂಗೆ, ಪೊ›. ಸಂತೋಷ ಮನ್ನೊಪಂತರ, ಪೊ.ಜಾಕಿಯಾ ಸೌದಾಗರ, ಪೂಜಾ ಕೂಡಲಗಿ, ಚೈತ್ರಾ ಹಿರೇಮಠ, ಇತರರಿದ್ದರು.
ಗುಡ್ ನ್ಯೂಸ್ ಕಾಲೇಜು: ಪಟ್ಟಣದ ಗುಡ್ ನ್ಯೂಸ್ ಕಾಲೇಜಿನಲ್ಲಿ ಪಪಂ, ಆರೋಗ್ಯ ಇಲಾಖೆ, ರೆಡ್ಕ್ರಾಸ್, ಎನ್ನೆಸ್ಸೆಸ್ ಮತ್ತು ರೋವರ ಸ್ಕೌಟ್ಸ್ ಸಹಯೋಗದಲ್ಲಿ ಡೆಂಘೆ ಜ್ವರದ ಕುರಿತು ತಿಳಿವಳಿಕೆ ಕಾರ್ಯಕ್ರಮ ಜರುಗಿತು. ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ. ಸತ್ಯನಾರಾಯಣ, ಡೆಂಗೆ ಹರಡುವುದು ಹೇಗೆ?, ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಿಸಿದರು. ಪ್ರಾಚಾರ್ಯ ಡಾ. ಮಹೇಶ ಹೊರಕೇರಿ ಅಧ್ಯಕ್ಷತೆ ವಹಿಸಿದ್ದರು. ಪೊ. ಎಂ.ಎಸ್. ಮುರಗೋಡಮಠ ಸ್ವಾಗತಿಸಿದರು. ಪ್ರೀತಿ ಕನವಳ್ಳಿ ವಂದಿಸಿದರು. ಉಪನ್ಯಾಸಕರಾದ ಶಶಿಕುಮಾರ ಕಟ್ಟಿಮನಿ, ಎಂ.ಬಿ. ಉಳ್ಳಾಗಡ್ಡಿ, ನೀಲಮ್ಮ ನೆನಕ್ಕಿ, ಇತರರಿದ್ದರು.
ದೇವಿಕೊಪ್ಪ ಪ್ರೌಢಶಾಲೆ: ತಾಲೂಕಿನ ದೇವಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಡೆಂಘೆ ನಿಯಂತ್ರಣ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು. ದೇವಿಕೊಪ್ಪ ಆರೋಗ್ಯ ತರಬೇತಿ ಕೇಂದ್ರದ ವೈದ್ಯಾಧಿಕಾರಿ ಗಿರಿಜಾ ಪಲ್ಲಕ್ಕಿ, ಸರಿಯಾದ ತ್ಯಾಜ್ಯ ವಿಲೇವಾರಿ ಮತ್ತು ಸುತ್ತಮುತ್ತಲಿನ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳ ಲಭ್ಯತೆಯನ್ನು ಕಡಿಮೆ ಮಾಡಬಹುದು ಎಂದರು. ಮುಖ್ಯೋಪಾಧ್ಯಾಯ ಕುಮಾರ ಕೆ.ಎಫ್. ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ರತ್ನಾ ಹೆಗಡೆ. ಶೈಲಜಾ ಕುಲಕರ್ಣಿ, ನಾಗರಾಜ ದೀಕ್ಷಿತ್, ಸುಮಂಗಲಾ ಸಂಕ್ಲೀಪೂರ, ಲೋಹಿತ್ ಡಿ.ಕೆ, ಶಿವಕ್ಕ ಡೊಂಕನವರ, ಸಿಕಂದರ ಹೊಸಳ್ಳಿ, ವಿನಾಯಕ ಪಲ್ಲೇದ, ಶಮಿನಾ ಮಕಾನದಾರ, ಮಲ್ಲಮ್ಮ ಸನ್ನಾಯ್ಕ, ಎಚ್.ಬಿ. ಜೋಡಳ್ಳಿ, ಲಕ್ಷ್ಮೀ ಅಂಗಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸರ್ಕಾರಿ ಪ್ರೌಢಶಾಲೆ ಬಗಡಗೇರಿ: ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಡೆಂಘೆ ಜ್ವರ ನಿಯಂತ್ರಣ ಜಾಗೃತಿ ಕಾರ್ಯಕ್ರಮ ನಿಮಿತ್ತ ವಿದ್ಯಾರ್ಥಿಗಳು ಡೆಂಘೆ ನಿಯಂತ್ರಣ ಬಗ್ಗೆ ಘೊಷಣೆ ಕೂಗುತ್ತ ಗ್ರಾಮದ ಪ್ರಮುಖ ಓಣಿಗಳಲ್ಲಿ ಪ್ರಭಾತಪೇರಿ ನಡೆಸಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳಿಗೆ ಎನ್.ಎಸ್. ಅಂಬಿಗೇರ ಪ್ರತಿಜ್ಞಾವಿಧಿ ಬೋಧಿಸಿದರು. ಬಗಡಗೇರಿ ಆರೋಗ್ಯ ಕೇಂದ್ರದ ವೈದ್ಯರಾದ ಬಸವರಾಜ, ಬೋಗೇನಾಗರಕೊಪ್ಪ ಗ್ರಾಪಂ ಕಾರ್ಯದರ್ಶಿ ಜಿ.ಎಂ. ಸುಳ್ಳಣ್ಣವರ, ಮುಖ್ಯ ಶಿಕ್ಷಕಿ ಎಸ್.ಎನ್. ಮಿಠಾಯಿಗಾರ, ಶಿಕ್ಷಕರಾದ ಎ.ಎಂ. ಶಿರಗುಪ್ಪಿ, ಶ್ರೀದೇವಿ ಬಣಗಾರ, ಬಿ.ವಿ. ಪಾಟೀಲ, ನೀಲಮ್ಮ ಸವದತ್ತಿ, ಮೆಹಬೂಬಿ ವಾಲಿಕರ, ಇತರರಿದ್ದರು.