

ಕಾರವಾರ:ಜಿಲ್ಲೆಯಲ್ಲಿ ಈ ವರ್ಷದಲ್ಲಿ ಇದುವರೆಗೆ 126 ಜನರಲ್ಲಿ ಡೆಂಘೆ ದೃಢಪಟ್ಟಿದೆ ಎಂದು ಡಿಎಚ್‌ಒ ಕಚೇರಿ ವರದಿ ತಿಳಿಸಿದೆ.
ಒಟ್ಟು 1688 ಶಂಕಿತ ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ 1504 ಪ್ರಕರಣಗಳ ರಕ್ತದ ಮಾದರಿ ಎಲಿಸಾ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 126 ಜನರಿಗೆ ಮಾತ್ರ ರೋಗ ಇರುವುದು ದೃಢಪಟ್ಟಿದೆ. ಕಾರವಾರ-8, ಅಂಕೋಲಾ-32, ಕುಮಟಾ-14, ಹೊನ್ನಾವರ-37,ಭಟ್ಕಳ-11, ಶಿರಸಿ-10, ಸಿದ್ದಾಪುರ-5, ಯಲ್ಲಾಪುರ-6, ಮುಂಡಗೋಡ, ಹಳಿಯಾಳ, ಜೊಯಿಡಾದಲ್ಲಿ ತಲಾ 1 ಪ್ರಕರಣಗಳು ಖಚಿತವಾಗಿವೆ.
ಜುಲೈ ತಿಂಗಳಲ್ಲಿ 8 ದಿನಗಳಲ್ಲಿ 35 ಜನರಿಗೆ ಡೆಂಘೆ ಲಕ್ಷಣ ಕಾಣಿಸಿದ್ದು, 24 ಜನರ ಎಲಿಸಾ ಪರೀಕ್ಷೆ ಮಾಡಲಾಗಿದೆ. 13 ಜನರಿಗೆ ಡೆಂಘೆ ಖಚಿತವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದರೆ, ಇದುವರೆಗೂ ಡೆಂಘೆಯಿಂದ ಯಾರೂ ಮೃತಪಟ್ಟಿರುವುದು ಖಚಿತವಾಗಿಲ್ಲ. ಜ್ವರದ ಲಕ್ಷಣದಿಂದ ಕೆಲವರು ಮೃತಪಟ್ಟಿದ್ದು, ಅವರು ಡೆಂಘೆಯಿಂದ ಸಾವಾಗಿದೆ ಎಂಬ ಸುದ್ದಿಯಾಘುತ್ತಿದೆ. ಆದರೆ, ಅರ‍್ಯಾರಿಗೂ ಡೆಂಘೆ ಇರುವುದು ಖಚಿತವಾಗಿಲ್ಲ. ಬ್ರೇನ್ ಟ್ಯೂಮರ್, ಮಧುಮೇಹ ಮುಂತಾದ ಬೇರೆ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ರಮೇಶ ರಾವ್ ತಿಳಿಸಿದ್ದಾರೆ.